

ಕಲಬುರಗಿ : ಖ್ಯಾತ ಗಾಯಕ ಮಹ್ಮದ್ ರಫಿ ಅವರ ಜನ್ಮ ಶತಮಾನೋತ್ಸವ ಆಚರಣೆ ಹಾಗೂ ಅದರಂಗವಾಗಿ ಹಿರಿಯ ಕಲಾವಿದರಿಗೆ ಸನ್ಮಾನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಡಿ.೨೫ರಂದು ಸಂಜೆ ೬-೩೦ ಗಂಟೆಗೆ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದ ಚಾಂದ್ ಜಾಕ್ಸನ್ ತಿಳಿಸಿದ್ದಾರೆ. ಗಾಯಕರಾದ ವಿಠ್ಠಲ್ ಮೇತ್ರೆ, ವಾಲ್ಮೀಕ್ ಕಾಂಬಳೆ,ಜಮೀರ್ ಅಹ್ಮದ್,ಆನಂದ ಆಲಮೇಲಕರ್, ಜಿಲಾನಿ, ರಾಜು ಕೋಬಾಳ,ಮಹಾಲಿಂಗ ಸುಂಕದ,ಪಾರ್ವತಿ ಉರ್ಕಿಮಠ,ಡಾ.ಶಶಿರೇಖಾ,ಶೈಲಜಾ ಬಗದಲ್ ಮೊದಲಾದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಂಗೀತಾಸಕ್ತರು ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.