15ರಂದು ಮಹಾಲಿಂಗೇಶ್ವರಸ್ವಾಮಿ ಆರಾಧನೆ

11-GPT-2-MAHALINGESWARA TEMPLE
ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ಮಹಾಲಿಂಗೇಶ್ವರಸ್ವಾಮಿಯ ಆರಾಧನೆ ಅಂಗವಾಗಿ ದೇವಾಲಯನ್ನು ಶುಚಿಗೊಳಿಸುತ್ತಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ರಂಗೂಪುರ ಗ್ರಾಮದಲ್ಲಿ ಜ.15ರಂದು ಶ್ರೀ ಮಹಾಲಿಂಗೇಶ್ವರಸ್ವಾಮಿಯ 7ನೇ ವರ್ಷದ ಆರಾಧನೆ ನಡೆಯಲಿದೆ.

ಈ ಅಂಗವಾಗಿ ದೇವಾಲಯಕ್ಕೆ ಬಣ್ಣ ತುಂಬಿಸಿ ಸಿಂಗರಿಸಲಾಗುತ್ತಿದೆ. ಧನುರ್ಮಾಸ ಮುಕ್ತಾಯದ ಅಂಗವಾಗಿ ಮಕರ ಸಂಕ್ರಾಂತಿಯಂದು ನಸುಕಿನಲ್ಲಿ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಸಲಾಗುವುದು. ಅಕ್ಕಪಕ್ಕದ ಹೊರೆಯಾಲ, ಚನ್ನವಡೆಯನಪುರ, ದೊಡ್ಡಹುಂಡಿ, ಹಿರೀಕಾಟಿ ಹಾಗೂ ಅರೇಪುರ ಗ್ರಾಮಗಳ ಜನರು ಭಾಗವಹಿಸುತ್ತಿದ್ದು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮಸ್ಥರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net