ಮಹಾಗಣಪತಿ ದೇವಸ್ಥಾನ ಲೋಕಾರ್ಪಣೆ ನಾಳೆ

7Mamadapur1
Published on

ಮಮದಾಪುರ: ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ಮೇ 9ರಂದು ಶ್ರೀ ಮಹಾಗಣಪತಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಜರುಗಲಿದೆ. ಮೇ 9 ಬೆಳಗ್ಗೆ 4.30ಕ್ಕೆ ಹಣಬರಟ್ಟಿಯ ಕೆಳದಿ ಹಿರೇಮಠ ಬಸವಲಿಂಗ ಪಟ್ಟದ ದೇವರು ಹಾಗೂ ಬೈಲಹೊಂಗಲದ ಬಸಯ್ಯ ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಬೆಳಗ್ಗೆ 5 ಗಂಟೆಯಿಂದ 9 ಗಂಟೆ ವರೆಗೆ ಹೋಮ ಹವನ ಜರುಗಲಿದೆ. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಬೆಳಗ್ಗೆ 11 ಗಂಟೆಗೆ ಕಳಸಾರೋಹಣ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಆರ್ಟ್​ ಆ್​ ಲಿವಿಂಗ್​ ಬೆಂಗಳೂರು ಡಾ.ಬಿ.ಎಂ. ಪಾಟೀಲ ಗುರೂಜಿ ಅವರಿಂದ ಸತ್ಸಂಗ ಕಾರ್ಯಕ್ರಮ ಹಾಗೂ ರಾತ್ರಿ ಭಜನೆ ಆಯೋಜಿಸಲಾಗಿದೆ. ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅಯೋಧ್ಯದ ಬಾಲರಾಮ ವಿಗ್ರಹ ಶಿಲ್ಪಿ ಡಾ.ಅರುಣ ಯೋಗಿರಾಜ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net