

ಶ್ರೀರಂಗಪಟ್ಟಣ: ಪಟ್ಟಣದ ಶ್ರೀ ಜ್ಯೋತಿರ್ಮಹೇಶ್ವರ ಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣ ಹಾಗೂ ಕ್ಷೇತ್ರದ ಒಳಿತಿಗಾಗಿ ನೂರಾರು ಋತ್ವಿಜರು ಮಹಾಚಂಡಿಕಾ ಹೋಮ ನೆರವೇರಿಸಿದರು.
ಶಿವಮೊಗ್ಗದ ಸಂಸ್ಕೃತ ಗ್ರಾಮ ಮತ್ತೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 120ಕ್ಕೂ ಹೆಚ್ಚು ವೈದಿಕರು ಪಟ್ಟಣದ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಹಾಗೂ ವಿದ್ವಾಂಸ ಕೇಶವ ಅವಧಾನಿ ನೇತೃತ್ವದಲ್ಲಿ ಶ್ರೀಲಕ್ಷ್ಮೀ ದೇಗುಲದ ಪ್ರಧಾನ ಅರ್ಚಕ ಕೃಷ್ಣಭಟ್, ನಿಮಿಷಾಂಭ ದೇಗುಲದ ಅರ್ಚಕ ಸೂರ್ಯನಾರಾಯಣ ಭಟ್, ವೇದಬ್ರಹ್ಮ ಲಕ್ಷ್ಮೀಶ ಶರ್ಮ ಸಮ್ಮುಖದಲ್ಲಿ 4 ದಿನಗಳಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5ರಿಂದ ಸಂಜೆ 9ಗಂಟೆವರೆಗೆ ಸಾವಿರ ಭಾರಿ ದುರ್ಗ ಶಪ್ತಸತಿ ಪಾರಾಯಣ ಸೇರಿದಂತೆ ಸುಬ್ರಮಣ್ಯ ಕಾರಂತ ಎಂಬುವರಿಂದ ದುರ್ಗದೀಪ ನಮಸ್ಕಾರ ಸೇವೆ ಅರ್ಪಿಸಲಾಯಿತು.
ಅಂತಿಮ ದಿನವಾದ ಭಾನುವಾರ ಬೆಳಗ್ಗೆ 8 ರಿಂದ ದೇವಾಲಯದ ಆವರಣದಲ್ಲಿ ವೈದಿಕ ಪಂಡಿತರು ಗಣಪತಿ ಪೂಜೆ, ಪುಣ್ಯಾಹಃ ವಾಚನ, ಕಳಸ ಸ್ಥಾಪನೆ ನಡೆಸಿ 10 ಹೋಮಕುಂಡಗಳಲ್ಲಿ 10 ಟನ್ ಬೆಲ್ಲದ ಅನ್ನದಿಂದ ಮಹಾ ಪೂರ್ಣಾಹುತಿ, ದಂಪತಿ ಪೂಜೆ, ಸುಹಾಸಿನಿ ಪೂಜೆ, ಕುಮಾರಿ ಪೂಜೆ, ಅವಭ್ರುತ ಸ್ನಾನ ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಿದರು.
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಪತ್ನಿ ಸಮತಿ ಹೋಮ ಕಾರ್ಯದಲ್ಲಿ ಪಾಲ್ಗೊಂಡರು.