ನರಸಿಂಹ ದೇವರಿಗೆ ಮಹಾಭಿಷೇಕ

New Project (5)
Published on

ಸುಬ್ರಹ್ಮಣ್ಯ: ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ವಿಷ್ಣುತೀರ್ಥ ಪೀಠಂನ ಡಾ.ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸೌರಮಾನ ಯುಗಾದಿ ಪ್ರಯುಕ್ತ ಶ್ರೀ ನರಸಿಂಹ ದೇವರಿಗೆ ಮಹಾಭಿಷೇಕ ನೆರವೇರಿಸಿದರು.

ಶ್ರೀ ಸಂಪುಟ ನರಸಿಂಹ ಸ್ವಾಮಿ ದೇವರ ಮುಂಭಾಗದಲ್ಲಿ ಫಲವಸ್ತು, ತರಕಾರಿ, ದವಸ ಧಾನ್ಯ, ನಂದಾದೀಪ, ಕನ್ನಡಿ, ಪಂಚಾಂಗ, ವಸ್ತ್ರಗಳನ್ನು ಜೋಡಿಸಿದ ವಿಷುಕಣಿಯನ್ನು ಇರಿಸಿದರು. ಆರಂಭದಲ್ಲಿ ವಿಷು ಕಣಿ ದರ್ಶನವನ್ನು ನರಸಿಂಹ ದೇವರಿಗೆ ಮಾಡಲಾಯಿತು. ಬಳಿಕ ಭಕ್ತರಿಗೆ ವಿಷುಕಣಿ ದರ್ಶನ ಲಭಿಸಿತು.

ಶ್ರೀಗಳು ನರಸಿಂಹ ದೇವರಿಗೆ ಮಹಾಭಿಷೇಕ, ವಿಷು ಕಣಿಗೆ ಪೂಜೆ ನೆರವೇರಿಸಿದರು. ಮಠದಲ್ಲಿ ಪಂಚಾಂಗ ಶ್ರವಣ ನೆರವೇರಿತು. ಶ್ರೀ ಮಠದ ದಿವಾನ ಸುದರ್ಶನ ಜೋಯೀಸ, ಶ್ರೀ ಮಠದ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net