

ಬೆಂಗಳೂರು: ಹಣ, ಆಸ್ತಿ, ಐಶ್ವರ್ಯಗಳ ಸಂಕೇತವಾದ ಕುಬೇರ ಸಂಪತ್ತಿನ ಅಧಿಪತಿ. ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಈ ಲಕ್ಷ್ಮೀ ಪುತ್ರನನ್ನು ಭಕ್ತಿಯಿಂದ ಆರಾಧಿಸಿದರೆ ಅಷ್ಟೈಶ್ವರ್ಯ ಕರುಣಿಸುತ್ತಾನೆ.
ಈ ನಿಟ್ಟಿನಲ್ಲಿ ಶಿವಶ್ರೀ ಮೀಡಿಯಾ ಪ್ರೈ. ಲಿ. ಹಾಗೂ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗ ಸಮಿತಿ ಮತ್ತು ತಸ್ಮೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ 700 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸೆ. 11 ರಿಂದ 21ರವರೆಗೆ ಅಖಿಲ ಮಹಾ ಕುಬೇರ ಸಂಪೂರ್ಣ ಯಾಗ ಹಮ್ಮಿಕೊಳ್ಳಲಾಗಿದೆ.
ನಗರದ ಅರಮೆನ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ಹನ್ನೊಂದು ದಿನಗಳ ಕಾಲ ನಡೆಯಲಿರುವ ಯಾಗದಲ್ಲಿ 11 ಯಾಗಕುಂಡಗಳು, 97 ಇತರೆ ಹೋಮ ಕುಂಡಗಳ ಮುಖಾಂತರ ತ್ರಿಮೂರ್ತಿಗಳಿಂದ ಪ್ರೇರಿತವಾದ ಪವಿತ್ರ ವೇದ ಮಂತ್ರಗಳೊಂದಿಗೆ ಕುಬೇರನಿಗೆ ಪೂಜೆ ಸಲ್ಲಿಸಲಾಗುವುದು.
ಇದೇ ಸ್ಥಳದಲ್ಲಿ ಬಹುಕಾಲದಿಂದ ಗಾಯತ್ರಿಯಾಗ, ಶನೇಶ್ವರಯಾಗ, ಶತ ಚಂಡಿಯಾಗ ಸೇರಿ ಇನ್ನಿತರೆ ಯಾಗ ಹಾಗೂ ಹೋಮಗಳನ್ನು ನಡೆಸಿಕೊಂಡು ಬರಲಾಗಿದೆ. 2009ರಲ್ಲಿ ಮಹಾಕಾಳ ಸರ್ಪಯಾಗ ಸಹ ನಡೆಸಲಾಗಿತ್ತು. ಹೀಗಾಗಿ ಯಾಗ ಭೂಮಿ ಎಂದೇ ಹೆಸರಾಗಿರುವ ಈ ಸ್ಥಳದಲ್ಲಿ ಈಗ ಕುಬೇರ ಯಾಗ ನಡೆಸಲಾಗುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಭಕ್ತರು ಹೆಸರು ನೋಂದಾಯಿಸಬೇಕಿದೆ.
ಯಾಗದ ಮುಖ್ಯಸ್ಥರಾದ ಬ್ರಹ್ಮ ಶ್ರೀ ಶ್ರೀ ರಂಗಂ ಸರನ್ಮೋಹನನ್ ತಂತ್ರಿಗಳ ನೇತೃತ್ವದಲ್ಲಿ ಯಾಗ ನಡೆಯಲಿದೆ. ನವಗ್ರಹ ಪೂಜೆ, ಮಹಾವಿಷ್ಣು ಪೂಜೆ, ಕುಬೇರ ಪೂಜೆ, ಸರ ಐಶ್ವರ್ಯ ಪೂಜೆ, ಅಷ್ಟಲಕ್ಷ್ಮೀಪೂಜೆ, ಧನಲಕ್ಷ್ಮೀ ಪೂಜೆ, ಲಕ್ಷ್ಮೀ ವಿನಾಯಕ ಪೂಜೆ ವಿವಿಧ ರೀತಿಯ ಹೋಮ ಕುಂಡಗಳು ಕಲಾಶಾಭಿಷೇಕ, ಅಷ್ಟಾಭಿಷೇಕ, ಶಂಕಾಭಿಷೇಕ, ಪುಷ್ಪಾಭಿಷೇಕ, ನವಾಭಿಷೇಕ, ಶಾಂತ ಕುಂಭ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾ ನೈವೇದ್ಯ, ಮಹಾಮಂಗಳಾರತಿ, ಮಹಾ ಗುರು ನಂದನಾ ಪೂಜೆ ನಡೆಯಲಿದೆ. ನಿತ್ಯ ನಡೆಯಲುವ ಯಾಗದಲ್ಲಿ ಭಕ್ತರಿಗೆ ಅನ್ನದಾಸೋಹ ಸಹ ಏರ್ಪಡಿಸಲಾಗಿದೆ. ಭಕ್ತರಿಗೆ ಸಂಕಲ್ಪ ಸೇವೆ ಮಾಡಿಸಲು (ಪ್ಲಾಟಿನಮ್ ಸೇವೆ, ಗೋಲ್ಡ್ ಸೇವೆ, ಡೈಮಂಡ್ ಸೇವೆ, ಸಿಲ್ವರ್ ಸೇವೆ)ಅವಕಾಶ ಕಲ್ಪಿಸಲಾಗಿದೆ.
ಕುಬೇರನ ಆರಾಧನೆಗಾಗಿ ಸಂಪರ್ಕಿಸಿ: ಮೊ: 9480390450/8951546098 ಸಂಪರ್ಕಿಸಬಹುದಾಗಿದೆ.