

ಮಾಗಡಿ
ಕುಡಿಯಲು ನೀರು ಸರಬರಾಜು ಮಾಡದೆ ರ್ನಿಲಸಿದ್ದಾರೆ ಎಂದು ಆಕ್ರೋಶಗೊಂಡ ನಾರಸಂದ್ರ ಗ್ರಾಮದ ಮಹಿಳೆಯರು ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಧನುಷ್ ಮಾತನಾಡಿ, ನಾರಸಂದ್ರ ಗ್ರಾಮದಲ್ಲಿ ಎರಡೂವರೆ ತಿಂಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಹಾಗಾಗಿ ಕೆಲಸ ಕಾರ್ಯ ಬಿಟ್ಟು ದೂರ ಹೋಗಿ ಕುಡಿಯುವ ನೀರು ತರುವಂತಾಗಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಹೋಗಲು ಮತ್ತು ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ಬಿಡಲು ಸಾಧ್ಯವಾಗುತ್ತಿಲ್ಲ. ಇದ್ದ ಕೊಳವೆಬಾವಿಯ ಪಂಪು, ಮೋಟಾರ್ ಕೆಳಕ್ಕೆ ಬಿದ್ದಿದೆ. ಇದನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿಲ್ಲ ಹಾಗೂ ಪರ್ಯಾಯವಾಗಿ ಬೇರೆ ಕೊಳವೆ ಬಾವಿಯನ್ನೂ ಕೊರೆಸುತ್ತಿಲ್ಲ ಅಥವಾ ವಾಟರ್ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ನೀರಿಗೆ ಪರದಾಡುವಂತಾಗಿದೆ ಎಂದು ದೂರಿದರು.
ನೀರಿನ ಸಮಸ್ಯೆ ಬಗ್ಗೆ ತೆರಳಿದರೆ ಪಿಡಿಒ ಸಿಗುತ್ತಿಲ್ಲ. ವಾರಕ್ಕೆ ಎರಡು ದಿನ ಮಾತ್ರ ಬರುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಮೀಟಿಂಗ್ ಇದೆ ಎಂಬ ಸಬೂಬು ಹೇಳುತ್ತಾರೆ. ಸಂಬಂಧಪಟ್ಟವರು ಕುಡಿಯುವ ನೀರು ಸರಬರಾಜು ಮಾಡದೆ ರ್ನಿಲಸುತ್ತಿದ್ದಾರೆ. ಕುಡಿಯುವ ನೀರು ಪೂರೈಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರೂ ಯಾವೊಬ್ಬ ಅಧಿಕಾರಿಯೂ ಕಷ್ಟ ಕೇಳಲು ಬಂದಿಲ್ಲ ಎಂದು ಗ್ರಾಪಂ ಕಾರ್ಯವೈಖರಿ ವಿರುದ್ದ ವಾಗ್ದಾಳಿ ನಡೆಸಿದರು.
ಪಿಡಿಒ ಅಮಾನತಿಗೆ ಒತ್ತಾಯ
ಗ್ರಾಪಂ ಸದಸ್ಯರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಖಾತೆ ಸೇರಿ ಇತರ ಕೆಲಸಗಳು ನಡೆಯುತ್ತಿಲ್ಲ. ಕಂದಾಯ, ವಾಟರ್ ಬಿಲ್ ಕಟ್ಟಿಸಿಕೊಳ್ಳುತ್ತಾರೆ. ಆದರೆ ಅಗತ್ಯ ಸೌಲಭ್ಯ ಒದಗಿಸಲು ರ್ನಿಲಕ್ಷ$್ಯ ತೋರುತ್ತಾರೆ. ಪಿಡಿಒ ಒಂದು ಗ್ರಾಮಕ್ಕೂ ಭೇಟಿ ನೀಡುತ್ತಿಲ್ಲ. ಗ್ರಾಮಸಭೆ ನಡೆಸಿ ವರ್ಷ ಕಳೆದಿದೆ, ಶಾಸಕರು ಕೂಡಲೇ ಪಿಡಿಒ ಅಮಾನತು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಮದ ಚೇತನ್, ರಮೇಶ್, ಚಂದ್ರಮ್ಮ, ಲಾವಣ್ಯ, ಮಮತಾ, ನಳಿನಾ, ಸುಜಾತ, ಬಿಂದು,ರತ್ನಮ್ಮ, ಕುಸುಮ, ರಾಣಿ, ಲಕ್ಷ್ಮೀ, ಗುಂಡಮ್ಮ ಇತರರು ಇದ್ದರು.
ಉತ್ತರ ಕರ್ನಾಟಕದ ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೆ. ಆದರೆ ನಮ್ಮ ಗ್ರಾಮದಲ್ಲೇ ಎರಡು ತಿಂಗಳಿಂದ ಕುಡಿಯಲು ನೀರಿಲ್ಲ. ನೀರಿಲ್ಲದೆ ಬಟ್ಟೆಗಳನ್ನು ಒಗೆಯಲು ಸಾಧ್ಯವಾಗುತ್ತಿಲ್ಲ, ನಾರಸಂದ್ರ ಕೆರೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳಿದ್ದು, ಬಟ್ಟೆ ತೊಳೆಯಲು ತೊಂದರೆಯಾಗಿದೆ.
ಚಂದ್ರಮ್ಮ, ಗ್ರಾಮದ ನಿವಾಸಿ
ಪಂಪು, ಮೋಟಾರು ಕಿತ್ತು ಕೊಳವೆಬಾವಿಗೆ ಬಿದ್ದ್ದಿರುವ ಕಾರಣ ನೀರಿಗೆ ಸಮಸ್ಯೆಯಾಗಿದೆ. ಸಮಸ್ಯೆ ಇಂದು ಗಮನಕ್ಕೆ ಬಂದಿದೆ. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೊಸದಾಗಿ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡಲಾಗುವುದು.
ಚಂದ್ರು, ಇಒ
ಹೊಸದಾಗಿ ಕೊಳವೆಬಾವಿ ಕೊರೆಸಲು ಜಿಪಂ ಎಇಇಗೆ ಪತ್ರ ಬರೆಯಲಾಗಿದೆ. ಇಂದಿನಿಂದ ವಾಟರ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೆರಡು ದಿನಗಳ ಒಳಗೆ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡಲಾಗುವುದು.
ಶಿವಕುಮಾರು, ಪಿಡಿಒ