

ಮಾಗಡಿ: ತಾಲೂಕಿನ ಹೆಬ್ಬಳಲು ಮತ್ತು ತಿಗಳರಪಾಳ್ಯದಲ್ಲಿ ರೈತರು ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಕಳವು ಮಾಡಲಾಗಿದೆ. ತಾಲೂಕಿನ ತಿಪ್ಪಸಂದ್ರ ಹೋಬಳಿ ಹೆಬ್ಬಳಲು ಗ್ರಾಮದ ಸಿದ್ದಗಂಗಯ್ಯ ಎಂಬುವರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ರಾತ್ರೋರಾತ್ರಿ ಕಿತ್ತು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ.
ಟೊಮ್ಯಾಟೋ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಹಣ ಕಳವು ಮಾಡುತ್ತಿದ್ದವರು ಈಗ ಟೊಮ್ಯಾಟೋ ಕಳ್ಳತನಕ್ಕೆ ಇಳಿದಿದ್ದಾರೆ. ಇದರಿಂದ ರೈತರು ತಾವು ಬೆಳೆದ ಟೊಮ್ಯಾಟೋ ಬೆಲೆಯನ್ನು ಕಾಯುವಂತಾಗಿದೆ. ಕೆಲವರು ಜಮೀನುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮುಂದಾಗಿದ್ದಾರೆ. ಆದರೆ ಟೊಮ್ಯಾಟೋ ಕಳವಾಗಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.