ಹಾವು ಕಚ್ಚಿ ಮಹಿಳೆ ಸಾವು

IMG-20230629-WA00482.jpg
Published on

ಮಾಗಡಿ: ಮನೆ ಹಿಂಬಾಗದ ಕೈತೋಟದಲ್ಲಿ ಹೂ ಕೀಳುವ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಂಗಮ್ಮ (70 )ಹಾವು ಕಡಿತದಿಂದ ಮೃತಪಟ್ಟ ಮಹಿಳೆಯಾಗಿದ್ದು, ದೇವರ ಪೂಜೆಗೆ ಮನೆಯ ಹಿಂಭಾಗದ ಕೈ ತೋಟದಲ್ಲಿ ಗುರುವಾರ ಸಂಜೆ ಹೂ ಕೀಳುವ ವೇಳೆ ಹಾವು ಕಚ್ಚಿದೆ. ಕೂಡಲೇ ಮಾಗಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಾಗ ಮೃತಪಟ್ಟಿದ್ದಾರೆ.

ಮೃತದೇಹವನ್ನು ಮಾಗಡಿ ಸರ್ಕಾರಿ ಆಸ್ಪತ್ರೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net