ಲಸಿಕೆ ಸಿಗದೆ ಹಾವು ಕಡಿತಕ್ಕೊಳಗಾದ ವ್ಯಕ್ತಿ ಸಾವು

27 RMN-MGD P5
Published on

ಮಾಗಡಿ: ಹಾವು ಕಡಿತಕ್ಕೆ ಲಸಿಕೆ ಸಿಗದೆ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ಕುದೂರು ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ತಾಲೂಕಿನ ಸೋಲೂರು ಗ್ರಾಮದ ಸೈಯದ್ ಸಮೀಉಲ್ಲಾ(38) ಮೃತ. ಸೋಲೂರಿನ ಲೇಔಟ್‌ನಲ್ಲಿ ಹೋಗುತ್ತಿದ್ದಾಗ ಹಾವು ಕಚ್ಚಿದ್ದು ಕೂಡಲೇ ಸೋಲೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಲಸಿಕೆ ಲಭ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದಾಗ ಕೂಡಲೇ 108 ಆಂಬುಲೆನ್ಸ್‌ಗೆ ಕರೆ ಮಾಡಲಾಗಿದೆ. 108 ವಾಹನ ಬರುವುದು ತಡವಾದಾಗ ಖಾಸಗಿ ವಾಹನದಲ್ಲಿ ನೆಲಮಂಗಲ ಆಸ್ಪತ್ರೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net