

ಮಾಗಡಿ
ಜಮೀನು ವಿಚಾರವಾಗಿ ಸಹೋದರರ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ತಾಲೂಕಿನ ನೆಸೆಪಾಳ್ಯ ಗ್ರಾಮದ ನಾಗರಾಜು (35) ಮೃತ ಪಟ್ಟವರು. .ಶುಕ್ರವಾರ ಬೆಳಗ್ಗೆ ಸಹೋದರರಾದ ನಾಗರಾಜು, ರಾಮಚಂದ್ರು ತಮ್ಮ ಜಮೀನಿನ ಬಳಿ ರೇಷ್ಮೆ ಸೋಪ್ಪು ಕೀಳುವ ವೇಳೆ ಜಗಳವಾಗಿದೆ.
ನಂತರ ಇದು ವಿಕೋಪ್ಪಕ್ಕೆ ತಿರುಗಿ ಇಬ್ಬರು ಮಚ್ಚು ನಿಂದ ಹೊಡೆದಾಡುವ ವೇಳೆ ತಮ್ಮ ನಾಗರಾಜುಗೆ ತಲೆಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.