ಕಪಾಲಕ್ಕೆ ಬಿದ್ದ ಏಟು ಪ್ರಾಣಕ್ಕೆ ಕುತ್ತು ತಂತು

crime
Published on

ಮಾಗಡಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಭೈರನಹಳ್ಳಿಯಲ್ಲಿ  ನಡೆದಿದೆ.

ಗ್ರಾಮದ ಗಂಗಚಲುವಯ್ಯ (65) ಕೊಲೆಯಾದವರು. ಗ್ರಾಮದ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಸುದರ್ಶನ ಎಂಬ ವ್ಯಕ್ತಿ ಗಂಗಚಲುವಯ್ಯ ಅವರ ಕಪಾಳಕ್ಕೆ ಹೊಡೆದಿದ್ದರಿಂದ ಗಂಗಚಲುವಯ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಕುಟುಂಬಸ್ಥರು ಮಾಗಡಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಸುದರ್ಶನ, ಬೆಟ್ಟಸ್ವಾಮಯ್ಯ, ಶಿವಮ್ಮ ಮತ್ತು ರಾಜ ಎಂಬುವರ ವಿರುದ್ಧ ರಾಜಮುಡಿ ಎಂಬುವರು ಮಾಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net