ಕಬಡ್ಡಿಗೆ ಮಾಗಡಿ ಹೆಸರುವಾಸಿ

FotoJet (1)
Published on

 ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿಕೆ

ಮಾಗಡಿ: ಮಾಗಡಿ ಕಬಡ್ಡಿಗೆ ಹೆಚ್ಚು ಹೆಸರು ಪಡೆದಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಪಟ್ಟಣದ ಕೆಂಪೇಗೌಡ ಕೋಟೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿಗೆ ಪುರಾತನ ಇತಿಹಾಸವಿದೆ. ದೇಶೀಯ ಕ್ರೀಡೆ ಕಬಡ್ಡಿ ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜತೆಗೆ ಹೆಸರು ತಂದುಕೊಟ್ಟಿದೆ. ಮಾಗಡಿ ಕೆಂಪೇಗೌಡರ ಹೆಸರಿನಲ್ಲಿ ಕಬಡ್ಡಿ ತಂಡ ರಚಿಸಿಕೊಂಡು ರಾಜ್ಯಮಟ್ಟದಲ್ಲಿ ಹೆಸರುಗಳಿಸಿದೆ. ಯುವಕರು ದೇಹ ದಂಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಒಗ್ಗಟ್ಟಿನಿಂದ ಆಟವಾಡಿದರೆ ಗೆಲ್ಲುವು ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net