ವಿಧಾನಸೌಧದೆದುರು ವಿಷ ಕುಡಿಯುತ್ತೇವೆ ಕೈಗಾರಿಕಾ ಪ್ರದೇಶ ನಿರ್ಮಾಣ ಕೈಬಿಡುವಂತೆ ರೈತ ಸಂಘ ಎಚ್ಚರಿಕೆ

11 RMN-MGD P4
Published on

ಮಾಗಡಿ
ತಾಲೂಕಿನ ಮರೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ಕೈಗಾರಿಕಾ ಪ್ರದೇಶ ನಿರ್ಮಾಣ ಯೋಜನೆ ಕೈಬಿಡುವಂತೆ ಆಗ್ರಹಿಸಿ ತಾಲೂಕು ರೈತ ಸಂದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ಉಪತಹಸೀಲ್ದಾರ್ ಶಿವಮೂರ್ತಿ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಹೊಸಪಾಳ್ಯ ಲೋಕೇಶ್, ಕೈಗಾರಿಕಾ ಪ್ರದೇಶಕ್ಕೆ ಫಲವತ್ತಾದ ಭೂಮಿಯನ್ನು ನೀಡಿದರೆ ರೈತ ಬೀದಿಗೆ ಬೀಳುತ್ತಾನೆ. ಇದಲ್ಲದೆ ರೈತರ ಮಕ್ಕಳು ದಿವಾಳಿಯಾಗುತ್ತಾರೆ. ಹಾಗಾಗಿ ಕೆಐಎಡಿಬಿ ಕೈಗಾರಿಕಾ ಪ್ರದೇಶ ವಾಡುವುದನ್ನು ಕೂಡಲೇ ಕೈಬಿಡಬೇಕು. ಇನ್ನೊಂದು ವಾರದೊಳಗೆ ತಹಸೀಲ್ದಾರ್ ಅವರು ಸಂಬಂಧಪಟ್ಟ ಅಧಿಕಾರಿಗಳ ಮತ್ತು ರೈತರ ಸಭೆ ಕರೆದು ಸ್ಥಳೀಯವಾಗಿ ಚರ್ಚಿಸಿ ಕೈಗಾರಿಕಾ ಪ್ರದೇಶ ಯೋಜನೆ ಕೈಬಿಡಬೇಕು. ರೈತರ ವಿರೋಧದ ನಡುವೆಯೂ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಮುಂದಾದರೆ ವಿಧಾನಸೌಧ ಎದುರೇ ರೈತರು ಸಾಮೂಹಿಕವಾಗಿ ವಿಷ ಕುಡಿಯಲಾಗುವುದು. ಇದಕ್ಕೆ ಕೆಐಎಡಿಬಿ ಮತ್ತು ತಾಲೂಕು ಆಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮರೂರು, ನಾರಸಂದ್ರ, ಶಿವನಸಂದ್ರ, ಆರನಕಟ್ಟೆಪಾಳ್ಯ, ಸಿಂಗ್ರಿಗೌಡನಪಾಳ್ಯ ಸೇರಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನಕ್ಕೆ ಮುಂದಾಗಿರುವ ಗ್ರಾಮಗಳು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಹೊಂದಿವೆ. ಇಂತಹ ಭೂಮಿಯಲ್ಲೇ ಕೈಗಾರಿಕಾ ಪ್ರದೇಶ ವಾಡಬೇಕೆಂಬ ಉದ್ದೇಶದ ಹಿಂದಿರುವ ಶಕ್ತಿಗಳು ಯಾರು ಎಂದು ಸ್ವಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೈಗಾರಿಕೆ ಪ್ರದೇಶಕ್ಕೆ ಭೂಮಿ ನೀಡುವುದಿಲ್ಲ ಎಂದು ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟಗಾರರ ಬೆಂಬಲಕ್ಕೆ ನಿಲ್ಲಬೇಕಾದ ಜನಪ್ರತಿನಿಧಿಗಳು, ಕೆಲ ಸಂಟನೆಗಳು ಮೌನ ತಾಳಿರುವುದು ನೋಡಿದರೆ ಬೇಸರವಾಗುತ್ತದೆ ಎಂದರು.

ರೈತರು ವ್ಯಾಪಾರಿಗಳಲ್ಲ
ರೈತ ಮುಖಂಡ ಪಟೇಲ್ ಹನುಮಂತಯ್ಯ ವಾತನಾಡಿ, ನಮ್ಮ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ನೀಡುವುದಿಲ್ಲ, ಒಂದು ವೇಳೆ ಭೂಮಿ ನೀಡಿದರೂ ಅದರ ಬರುವ ಹಣದಿಂದ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ರೈತರು ಸಾವಿರಾರು ಮಂದಿಗೆ ಅನ್ನ ನೀಡುವ ಅನ್ನದಾತರು, ವ್ಯಾಪಾರಿಗಳಲ್ಲ. ಗೋವಾಳದ ಜಮೀನುಗಳಲ್ಲಿ ಕೈಗಾರಿಕಾ ಪ್ರದೇಶ ವಾಡಲಿ, ನಾವೂ ಬೆಂಬಲಿಸುತ್ತೇವೆ ಎಂದರು.

ಶಿರಸ್ತೇದಾರ್ ಶಿವಮೂರ್ತಿ ವಾತನಾಡಿ, ರೈತ ಸಂ ನೀಡಿರುವ ಮನವಿಯನ್ನು ತಹಸೀಲ್ದಾರ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ರೈತಮುಖಂಡರಾದ ರವಿಕುವಾರ್, ಸುರೇಶ್ ಕುವಾರ್, ಬುಡನ್ ಸಾಬ್, ಕರೇನಹಳ್ಳಿ ಲೋಕೇಶ್, ಕಾಂತರಾಜು, ವೆಂಕಟೇಶ್, ರಂಗಸ್ವಾಮಯ್ಯ, ಹನುಮಂತರಾಜು, ಜಯಣ್ಣ, ಲಿಂಗಪ್ಪ, ಯೋಗೇಶ್, ಸದಾಶಿವಯ್ಯ, ಷಡಾಕ್ಷರಿ, ಕರಿಯಪ್ಪ, ದರ್ಶನ್ ಗೌಡ, ಹುಚ್ಚೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net