

ಮಾಗಡಿ
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಉಡುಕುಂಟೆ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪದವಿ ಪೂರ್ವ ಕಾಲೇಜುನಲ್ಲಿ ನಡೆದ ಚುನಾವಣೆಯಲ್ಲಿ ಒಮ್ಮತದ ತಿರ್ಮಾನದಿಂದ ಉಡುಕುಂಟೆ ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಡುಕುಂಟೆ ಮಂಜುನಾಥ್ ಮಾತನಾಡಿ, ಪ್ರೌಢಶಾಲಾ ಬಡ್ತಿ ಶಿಕ್ಷಕರ ವೇತನದಲ್ಲಿ ವೇತನ ತಾರತಮ್ಯ, ಅನುದಾನಿತ ಹಾಗೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕರುಗಳ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕರುಗಳಿಗೆ ಕೌಶಲ್ಯ ಆಧಾರಿತ ಕಾರ್ಯಗಾರ ಏರ್ಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗಳಲ್ಲಿ ಕಾನೂನುಗಳ ಸ್ವಷ್ಟತೆ ಇಲ್ಲ. ಕಳೆದ 25 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಸುವ ಶಿಕ್ಷಕರಿಗೆ ವರ್ಗಾವಣೆ ಇಲ್ಲದೆ ಇರುವುದು, ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಶಿಕ್ಷಕರ ಬಾಕಿ ಇರುವ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಪಡಿಸುವುದು ಸೇರಿದಂತೆ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬೆಟ್ಟಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸ್ವಾಮಿ ಎನ್.ಕಾರ್ಯದರ್ಶಿ ಎಲ್.ಸಿ.ಮಹದೇವಯ್ಯ, ಜಿಲ್ಲಾ ನೌಕರರ ಸಂಘದ ರವಿ, ಸತೀಶ್, ಕಾರ್ಯದರ್ಶಿ ಶಿವಸ್ವಾಮಿ, ತಾಲೂಕು ಕಾರ್ಯದರ್ಶಿ ಡಿ.ರಾಜಗೋಪಾಲ್, ಹರ್ತಿ ನಟರಾಜು, ಕಂಬಾಳು ಮಂಜುನಾಥ್, ಶ್ರೀನಿವಾಸಯ್ಯ, ಡಿ.ಶ್ರೀನಿವಾಸ್, ಗುರುಮೂರ್ತಿ, ರುದ್ರಸ್ವಾಮಿ, ವೆಂಕಟೇಶ್, ರಾಜುಗೌಡ, ಎಂ.ಎಸ್.ನಾಗರಾಜು, ಮಂಜುಳಾ, ಹರ್ತಿ ಶ್ರೀನಿವಾಸ್ ಇತರರು ಇದ್ದರು.