ನಾಳೆ ಜೆಡಿಎಸ್ ಮೊದಲ ಪಟ್ಟಿ ಎಚ್ಡಿಕೆ ಘೋಷಣೆ

15-12-rama-HDK
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ರಾಮನಗರ: ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿ.16ರ ಶುಕ್ರವಾರ ಬಿಡುಗಡೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

ಜಿಲ್ಲೆಯಲ್ಲಿ ನಡೆಯುವ ಪಂಚರತ್ನ ಯಾತ್ರೆಗೆ ಗುರವಾರ ಸಂಜೆ ಮಾಗಡಿಯಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ವಂತವಾಗಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಪಕ್ಷದ ಸ್ಪಷ್ಟ ಗುರಿಯನ್ನು ಜನತೆಗೆ ತಿಳಿಸುವ ಪಂಚ ರತ್ನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಈಗಾಗಲೇ ಸಾಗಿ ಬಂದಿರುವ ಕ್ಷೇತ್ರಗಲ್ಲಿ ನಿರೀಕ್ಷೆಗೂ ಮೀರಿ ಸ್ಪಂಧನೆ ವ್ಯಕ್ತವಾಗಿದೆ. ಗುರವಾರದಿಂದ ರಾಮನಗರ ಜಿಲ್ಲೆಯಲ್ಲಿಯೂ ಮುಂದಿನ ನಾಲ್ಕು ದಿನಗಳ ಕಾಲ ಯಾತ್ರೆ ಸಂಚಾರ ಮಾಡಲಿದ್ದು, ನಂತರ ಮಂಡ್ಯಯಲ್ಲಿ ಸಾಗಿ ಜ.3ರಿಂದ ಬೀದರ್ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಅಲ್ಲದೆ, ಮುಂದಿನ ಮಾರ್ಚ್ 20ರವರೆಗೆ ರಾಜ್ಯದ 120 ಕ್ಷೇತ್ರಗಳಲ್ಲಿ ಪಂಚ ರತ್ನ ಯಾತ್ರೆಯ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಕ್ಷೇತ್ರದ ಅಭ್ಯರ್ಥಿಗಳು ಯಾರು ಎನ್ನುವ ವಿಚಾರದ ಬಗ್ಗೆ ಎಲ್ಲರಿಗೂ ಸಹಜವಾಗಿಯೇ ಕುತೂಹಲವಿದೆ. ಇದಕ್ಕೆ ಶುಕ್ರವಾರ ಮೊದಲ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪಕ್ಷಾತೀತ ಕಾರ್ಯಕ್ರಮ: ಶ್ರೀನಿವಾಸ ಕಲ್ಯಾಣೋತ್ಸವವು ನಮ್ಮ ಪಕ್ಷದ ಕಾರ್ಯಕ್ರಮವಲ್ಲ, ಪಕ್ಷಾತೀತ ಕಾರ್ಯಕ್ರಮ. ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ನಮ್ಮ ಕುಟುಂಬ ಶ್ರೀನಿವಾಸ ಕಲ್ಯಾಣದ ಮೂಲಕ ಜನರಿಗೆ ಒಳಿತನ್ನು ಕೋರುತ್ತಿದೆ. ಈ ಉತ್ಸವವನ್ನು ತಿರುಪತಿ ತಿಮ್ಮಪ್ಪ ದೇವಾಲಯದ 80 ಅರ್ಚಕರ ತಂಡ ನಡೆಸಿಕೊಡುತ್ತಿದ್ದು, ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬಹುದು ಎಂದರು. ಈ ಕಾರ್ಯಕ್ರಮದಲ್ಲಿ ತಂದೆ ತಾಯಿ ದೇವೇಗೌಡ ಮತ್ತು ಚನ್ನಮ್ಮ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಉತ್ತಮ ಕೆಲಸ ಮಾಡಿದ್ದಾರೆ: ಎ. ಮಂಜುನಾಥ್ ಮಾಗಡಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದ ಹೊರತಾಗಿಯೂ ಎಲ್ಲರ ಸಹಕಾರ ಪಡೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಪ್ರಶಂಶಿಸಿದರು.

ಗೋ ಪೂಜೆ: ಸಂಜೆ 7 ಗಂಟೆ ಸುಮಾರಿಗೆ ಮಾಗಡಿಗೆ ಆಗಮಿಸಿದ ಎಚ್.ಡಿ.ಕೆ, ಶ್ರೀ ರಂಗನಾಥ ಸ್ವಾಮೀ ದೇವಾಲಯಕ್ಕೆ ಬೇಟಿ ನೀಡಿ, ಗೋಪೂಜೆ ನಡೆಸಿ ಆರ್ಶೀವಾದ ಪಡೆದುಕೊಂಡರು. ಸೋಮನಾಥೇಶ್ವರ ದೇವಾಲಯದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಸಾ.ರಾ.ಮಹೇಶ್, ಎ.ಮಂಜುನಾಥ್, ಮುಖಂಡರಾದ ಇ.ಕೃಷ್ಣಪ್ಪ, ಕೆ.ಕೃಷ್ಣಮೂರ್ತಿ, ಪ್ರಕಾಶ್, ದವಳಗಿರಿ ಚಂದ್ರಣ್ಣ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net