ಮಾಗಡಿ ತಾಲೂಕು ನೌಕರರ ಸಂಘಕ್ಕೆ ಸಿ.ಪ್ರಕಾಶ್ ಅಧ್ಯಕ್ಷ

15-RMN-MGD-P4.jpg
Published on

ಮಾಗಡಿ : ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಮಾಡಬಾಳ್ ಶಿವರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ನೌಕರರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಪ್ರಕಾಶ್ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ಜಿಲ್ಲಾಧ್ಯಕ್ಷ ಸತೀಶ್ ಸಿ.ಪ್ರಕಾಶ್ ಅವರ ಅವಿರೋಧ ಆಯ್ಕೆ ಘೋಷಿಸಿದರು.


ಇದೇ ವೇಳೆ ನೂತನ ಅಧ್ಯಕ್ಷ ಸಿ.ಪ್ರಕಾಶ್ ಮಾತನಾಡಿ, ನೌಕರರ ಧ್ವನಿಯಾಗಿ ಕೆಲಸಮಾಡುವುದೆ ನನ್ನ ಧ್ಯೇಯವಾಗಿದೆ, ನೌಕರರಿಗೆ ಸಾಕಷ್ಟು ಸಮಸ್ಯೆಗಳಿದ್ದು ಇಲಾಖೆಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು, ಈ ಹಿಂದಿನ ಅಧ್ಯಕ್ಷ ಶಿವರಾಮಯ್ಯ ಅವರು ನೌಕರರ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ ಅವರ ಮಾರ್ಗದರ್ಶನ ಹಾಗೂ ಎಲ್ಲಾ ನೌಕರರ ಸಹಕಾರ ಪಡೆದು ರಾಜ್ಯಕ್ಕೆ ಮಾದರಿಯಾಗುವಂತೆ ಸಂಘವನ್ನು ಮುನ್ನಡೆಸಿಕೊಂಡು ಹೋಗಲಾಗುವುದು.


ನಿವೃತ್ತ ನೌಕರರಿಗೆ ಪಿಂಚಣಿ, ಬಡ್ತಿ ವಿಳಂಬ, ತಾಂತ್ರಿಕವಾಗಿ ಲೋಪದೋಷ ಇರುವ ಎಚ್‌ಆರ್‌ಎಂಎಸ್ ಸಮಸ್ಯೆ ಸರಿಪಡಿಸುವುದು ಹಾಗೂ ಟೈಮ್ ಬಾಂಡ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.


ಮಾಜಿ ಅಧ್ಯಕ್ಷ ಶಿವರಾಮಯ್ಯ, ರಾಜ್ಯ ಪರಿಷತ್ ಸದಸ್ಯ ಧರಣೇಶ್, ಖಜಾಂಚಿ ಮಂಗಳಗೌರಮ್ಮ, ಉಪಾಧ್ಯಕ್ಷ ಯೋಗೇಶ್, ಸಂಘಟನಾ ಕಾರ್ಯದರ್ಶಿ ಚೇತನ್, ಕ್ರೀಡಾ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷೆ ಹೇಮಾವತಿ, ಹಿರಿಯ ಉಪಾಧ್ಯಕ್ಷ ಶ್ರೀಧರ್ ಮೂರ್ತಿ,
ಬಿಎನ್. ಜಯರಾಮು,ಸಿ.ಬಸವರಾಜು, ಶಿವರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ, ಕೆ.ಪಿ.ರಂಗಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net