ಕ್ರಷರ್ ನಲ್ಲಿ ಕಂದಕಕ್ಕೆ ಬಿದ್ದ ಟಿಪ್ಪರ್ ಚಾಲಕ ಸಾವು

IMG-20230629-WA0049.jpg
Published on

ಮಾಗಡಿ: ಕ್ರಷರ್ ನಲ್ಲಿ ಜಲ್ಲಿ ತುಂಬಿದ ಟಿಪ್ಪರ್ ಹಿಂಬದಿಗೆ ತೆಗೆಯುವ ವೇಳೆ ಅಯಾ ತಪ್ಪಿ ಸುಮಾರು 70 ಅಡಿ ಅಳ್ಳಕೆ ಬಿದ್ದು ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬ್ಯಾಲಕೆರೆ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ ಅರಲಕಲಗೂಡು ತಾಲೋಕಿನ ಅಣ್ಣೆಗಾನಹಳ್ಳಿ ಗ್ರಾಮದ ಮಧುಸೂಧನ್ (21) ಸ್ಥಳದಲ್ಲೇ ಮೃತಪಟ್ಟ ಚಾಲಕ.

ಜಲ್ಲಿತುಂಬುವ ವೇಳೆ ಈ ಅವಘಡ ಸಂಭವಿಸಿದ್ದು ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಪಡೆಯದೆ ಲಾರಿ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ತಿಳಿದ ಕೂಡಲೇ ಪೊಲೀಸರು ಮತ್ತು ಗಣಿ ಭೂ ವಿಜ್ಣಾನ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net