

ಮಾಗಡಿ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ಬಳಿ ನಡೆದಿದೆ.
ಹಾರೋಹಳ್ಳಿ ಬೆಳ್ಳನ ಕುಪ್ಪೆ ನಿವಾಸಿ ದರ್ಶನ್ (19) ಮೃತಪಟ್ಟ ದುರ್ದೈವಿ. ಮತೋರ್ವ ಮೇಗಲ ಬೀದಿಯ ಭರತ್ ಗೆ ಗಂಭೀರಗಾಯವಾಗಿದ್ದು ಚಿಕಿತ್ಸೆಗಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಐಟಿಐ ವಿದ್ಯಾರ್ಥಿಗಳಾಗಿದ್ದು ಪರೀಕ್ಷೆ ಬರೆಯಲು ಮಾಗಡಿಗೆ ಬೈಕ್ ನಲ್ಲಿ ಬರುವ ವೇಳೆ ಜೋಡುಗಟ್ಟೆ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.
ಬೈಕ್ ಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಮೇತ ಸವಾರ ಬಸ್ ನ ಮುಂಭಾಗಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಮಾಗಡಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜೋಡುಗಟ್ಟೆ ಕ್ರಾಸ್ ತೀರ ತಿರುವಿದ್ದು ಇದರಿಂದ ನಿರಂತರವಾಗಿ ಇಲ್ಲಿ ಅಪಘಾತಗಳು ನಡೆಯುತ್ತಿರುತ್ತವೆ ಅಪಘಾತ ನಡೆಯದಂತೆ ಸಂಬಂಧಪಟ್ಟವರು ಯಾವುದೆ ಮುಂಜಾಗ್ರತೆ ಕೈಗೊಳ್ಳದೆ ಇರುವುದೆ ಈ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ಅರೋಪಿಸಿದ್ದಾರೆ.