

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಸೋತಿದ್ದರು ಬದುಕಿದ್ದೇನೆ ದೃತಿಗೆಡುವುದು ಬೇಡ. ತಾಲೋಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆತ್ಮಾವಲೋಕನ ಸಭೆ ನಡೆಸಿ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇನೆ. ನಾನು ಸೋತಿದ್ದರು ಪಕ್ಷದ ಸಂಘಟನೆಗೆ ಒತ್ತು ನೀಡುತ್ತೆನೆ. ಈ ಸೋಲಿಗೆ ನಾನೆ ಹೊಣೆ ಎಂದರು.
ಅಧರ್ಮ , ವಾಮ ಮಾರ್ಗ, ವಯಕ್ತಿಕ ತೇಜೋವಧೆ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ನ್ಯಾಯ ಸಮ್ಮತವಾಗಿ ಚುನಾವಣೆ ಎದುರಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿಂದ ಹೆಚ್ಚು ಸ್ಥಾನ ಗಳಿಸಿದೆ ಜೆಡಿಎಸ್ ಪಕ್ಷ ತಂತ್ರಗಾರಿಕೆ ಮಾಡಲಿಲ್ಲ, ಕಾಂಗ್ರೆಸ್ ಪಕ್ಷದ ಸುಳ್ಳು ಅಪಪ್ರಚಾರ, ಟೊಳ್ಳು ಭರವಸೆಯಿಂದ ರಾಜ್ಯದಲ್ಲಿ ಅವರ ಗೆಲುವು ಸಿಕ್ಕಿದೆ ಎಂದು ಲೇವಡಿ ಮಾಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು 5 ಸಾವಿರ ಬೆಲೆ ಬಾಳುವ ಸುಮಾರು 60 ಸಾವಿರ ಗಿಪ್ಟ್ ಕಾರ್ಡ್ ಗಳನ್ನು ತಿಳುವಳಿಕೆ ಇಲ್ಲದವರಿಗೆ, ಅಮಾಯಕರಿಗೆ, ಬಡವರ ಮನೆ, ಮನೆಗಳಿಗೆ ವಿತರಿಸಿದ್ದಾರೆ. ಇದರಿಂದ ಮತ ಪಡೆಯಲು ಅವರಿಗೆ ಸಾಧ್ಯವಾಗಿದೆ ಇದನ್ನು ಬಿಟ್ಟು ಅವರ ಗೆಲುವಿಗೆ ಯಾವ ರಣ ತಂತ್ರ ಮಾಡಿಲ್ಲ ಎಂದು ಟೀಕಿಸಿದರು.
ಗಿಪ್ಟ್ ಕಾರ್ಡ್ ನಲ್ಲಿ ಬಾರ್ ಕೊಡ್ ಇದ್ದು ಯಾವ ವಸ್ತು ನೀಡುತ್ತಾರೆ ಎಂಬುದು ಬಹಳ ಮುಖ್ಯ, ಇದರಿಂದ ಮತಪಡೆದು ಗೆದ್ದವರು ಇವರಿಗೆ ಗಿಪ್ಟ್ ನೀಡದೆ ಮೋಸ ಮಾಡಿದರೆ ರಾಜಕಿಯದಲ್ಲಿ ಉಳಿಯಲು ಸಾಧ್ಯವಿಲ್ಲ ಸರ್ವನಾಶ ವಾಗುತ್ತಾರೆ ಎಂದು ಕಾಂಗ್ರೆಸ್ ಪಕ್ಷ ದವರ ವಿರುದ್ದ ಕೆಂಡಮಂಡಲರಾದರು.
ನನ್ನ ವಿರುದ್ದ ನಡೆಸಿದ ಷಡ್ಯಂತ್ರಕ್ಕೆ ನಾನು ಬಗ್ಗುವುದಿಲ್ಲ ಮತ್ತೇ ಜನರಿಂದ ಮೇಲೆದ್ದು ಬರುತ್ತೇನೆ ಈ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ನಾನು ಹುಟ್ಟು ಹೋರಾಟಗಾರ ನನ್ನ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಿಸುತ್ತೇನೆ ಎಂದು ತಿಳಿದುಕೊಂಡಿದ್ದರೆ ಅದು ಕನಸು ಮಾತ್ರ ಎಂದರು.
ಮೋಸ, ದರ್ಪ, ದೌರ್ಜನ್ಯ ದಿಂದ ಗೆದ್ದಿದ್ದಾರೆ. ದೈರ್ಯಗೆಡಬೇಡಿ, ನನ್ನ ಸಂಪಾದನೆ ಈ ಕ್ಷೇತ್ರಕ್ಕೆ ಮುಡುಪಾಗಿಡುತ್ತೇನೆ. ರಾಜಕೀಯಕ್ಕೆ ಬಂಡವಾಳ ಹಾಕುವುದು ಗೊತ್ತು ಜೆಡಿಎಸ್ ಮುಖಂಡರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಮತ್ತೆ ನಾನು ಗೆಲ್ಲುತ್ತೇನೆ ಅಲ್ಲಿಯವರೆಗೂ ನಾನು ಮಲಗುವುದಿಲ್ಲ ಎಂದು ಶಫಥ ಮಾಡಿದರು.
ನ್ಯಾಯ ಸಮ್ಮತವಾದ ಚುನಾವಣೆ ಈ ಭಾರಿ ನಡೆದಿಲ್ಲ. ಇದಲ್ಲದೇ 70 ಕ್ಷೇತ್ರದಲ್ಲಿ ಕಾಂಗ್ರೆಸ್ ರಣ ತಂತ್ರ ಮಾಡಿದ್ದಾರೆ. ಡಿಕೆ.ಶಿವಕುಮಾರು ಸಿಎಂ ಹಾಗಬೇಕೆಂದು ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಇದಕ್ಕೆ ನನ್ನ ತಕರಾರಿಲ್ಲ , ಅವರು ಮುಖ್ಯಮಂತ್ರಿ ಆಗಿ ಜಿಲ್ಲೆಗೆ, ರಾಜ್ಯಕ್ಕೆ ಸಹಾಯ ಮಾಡಲಿ, ಮಂತ್ರಿಯಾಗುತ್ತೇನೆ ಕ್ಷೇತ್ರಕ್ಕೆ ಕೆಲಸ ಮಾಡುತ್ತೇನೆ ಎನ್ನುವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಮುಖಂಡರಾದ ರೆಹಮತ್, ಎಂ.ಎನ್.ಮಂಜುನಾಥ್, ಅನಿಲ್ ಕುಮಾರು, ರಾಮು, ರೂಪೇಶ್, ನರಸೇಗೌಡ, ಜುಟ್ನಹಳ್ಳಿ ಜಯರಾಮು, ದೊಡ್ಡಯ್ಯ, ಗುಡ್ಡೇಗೌಡ, ಹಲಸಬೆಲೆ ಗಂಗರಾಜು, ಎಂ.ಸಿ.ಹನುಂಮತರಾಜು ಇತರರು ಇದ್ದರು.