

ಬೆಂಗಳೂರು: ದಕ್ಷಿಣ ರೈಲ್ವೆಯ ಮಧುರೈ-ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ.
ಪ್ರಾಯೋಗಿಕ ಸಂಚಾರ ಬೆಳಗ್ಗೆ 5.15ಕ್ಕೆ ಮಧುರೈನಿಂದ ಪ್ರಾರಂಭವಾಗಿ ತಿರುಚ್ಚಿಗೆ 7.15 ತಲುಪಿದ್ದು, ಸೇಲಂನಿಂದ 10ಕ್ಕೆ ನಿರ್ಗಮಿಸಿದೆ. ಮಧ್ಯಾಹ್ನ 1.30ರ ಹೊತ್ತಿಗೆ ಬೆಂಗಳೂರು ತಲುಪಿದೆ. ಸೋಮವಾರ ಮಧ್ಯಾಹ್ನ 1.45ಕ್ಕೆ ಹೊರಟ ರೈಲು ಸೇಲಂ, ತಿರುಚ್ಚಿ ಮಾರ್ಗವಾಗಿ ರಾತ್ರಿ 10.25ಕ್ಕೆ ಮಧುರೈ ತಲುಪಿದೆ.
ಈ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ರೈಲು ಬಿಳಿ ಮತ್ತು ಕೇಸರಿ ಬಣ್ಣದಿಂದ ಕೂಡಿದ್ದು, 8 ಬೋಗಿಗಳನ್ನು ಹೊಂದಿವೆ. ವೇಳಾಪಟ್ಟಿ, ದರ ಇನ್ನಷ್ಟೇ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ.