ಮದ್ರಾಸ್ ಐ ಸೋಂಕಿನಿಂದ ಜನರಲ್ಲಿ ಭೀತಿ

hatti
ಡಾ.ವಸಂತ್‌ಕುಮಾರ್‌ವೈ.ಹುಡೇದಮನಿ.
Published on

ಹಟ್ಟಿಚಿನ್ನದಗಣಿ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ತೇವಾಂಶ ಹೆಚ್ಚಳದಿಂದ ಸಮಸ್ಯೆ ಉಲ್ಬಣ

ಜುಲೈ ಸತತ ಹಲವು ದಿನ ಮಳೆ ಸುರಿಯಿತು. ಇದರ ಪರಿಣಾಮ ವಾತಾವರಣ ತೇವಾಂಶಗೊಂಡಿದ್ದರಿಂದ ರೋಗಭಾದೆ ಕಾಣಿಸಿಕೊಂಡಿದೆ. ಕಣ್ಣುಗಳು ಚುಚ್ಚುವುದು, ಉರಿಯುವುದು, ಕೆಂಪು ಬಣ್ಣಕ್ಕೆ ತಿರುಗುವುದು, ತೋರಿಕೆ ರೋಗಿಗಳು ಹೈರಾಣಿ ಹೋಗಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ಗಣಿ ಕಂಪನಿ ನೌಕರರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ದಿನಕ್ಕೆ ಸರಾಸರಿ 70-80 ಜನ ಚಿಕಿತ್ಸೆ ಪಡೆಯಲು ಆಸ್ಪತ್ರಗೆ ಅಲೆದಾಡುತ್ತಿದ್ದಾರೆ.

ಏಕಾಕಾಲದಲ್ಲಿ ಹೆಚ್ಚು ಜನರು ಕಾಯಿಲೆ ತುತ್ತಾಗಿದ್ದರಿಂದ ಔಷಧಿ ಸಮಸ್ಯೆ ಎದುರಾಗಿದೆ. ಕೆಲ ವಸತಿ ನಿಲಯಗಳಲ್ಲಿ ಈಗಾಗಲೇ ಕಣ್ಣು ಬೇನೆ ತುತ್ತಾದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಸೋಂಕಿತ ನೌಕರರಿಗೆ ರಜೆ ನೀಡಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ವೈದ್ಯರು ಹೇಳೋದೇನು?: ಸುಖಾ ಸುಮ್ಮನೆ ಸಂಚರಿಸುವುದು ಬೇಡ. ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕಣ್ಣು ತಿಕ್ಕಿಕೊಂಡು ವಸ್ತುಗಳನ್ನು ಸ್ಪರ್ಷ ಮಾಡಬಾರದು. ಪರಸ್ಪರ ಕೈಕುಲುಕುವುದು ಮಾಡಬಾರದು. ಪದೇ ಪದೆ ಕಣ್ಣು ತಿಕ್ಕಿಕೊಳ್ಳಬಾರದು. ಸೋಂಕಿನ ಬಗ್ಗೆ ಯಾವುದೆ ಭೀತಿಗೊಳಗಾಗುವುದು ಬೇಡ. ಹೆಚ್ಚು ರೋಗ ನಿರೋಧ ಶಕ್ತಿ ಹೊಂದಿದವರು ಬೇಗ ಗುಣಮುಖರಾಗುತ್ತಾರೆ. 4ರಿಂದ 6 ದಿನಗಳಲ್ಲಿ ಸಹಜವಾಗಿ ಕಣ್ಣಿನ ಕಾಯಿಲೆ ಕಡಿಮೆಯಾಗುತ್ತದೆ. ಅಸುರಕ್ಷತೆಯಿಂದ ಸೋಂಕು ತಗುಲಿಸಿಕೊಂಡು ಮಾನಸಿಕ ಹಿಂಸೆ ಅನುಭವಿಸುವದಕ್ಕಿಂತ ಮುಂಜಾಗ್ರತೆ ಕ್ರಮಕೈಗೊಳ್ಳುವುದು ಸೂಕ್ತ ಎಂದು ವೈದ್ಯರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net