ಸೈಕಲ್ ಟೈರ್​ಗೂ ಟಿಕೆಟ್! ಪ್ರಶ್ನಿಸಿದ್ದಕ್ಕೆ ಮೇಲಿಂದ ಆರ್ಡರ್​ ಎಂದ KSRTC ಬಸ್​ ಕಂಡಕ್ಟರ್​

KSRTC Ticket
Published on

ಹಾವೇರಿ: ಸರ್ಕಾರಿ ಸಾರಿಗೆ ಬಸ್​ಗಳಲ್ಲಿ 30 ಕೆಜಿ ತೂಕದವರೆಗಿನ ಲಗೇಜುಗಳನ್ನು ಉಚಿತವಾಗಿ ಸಾಗಿಸುವ ಅವಕಾಶವಿದೆ. ಆದರೆ, ಇಲ್ಲೊಬ್ಬ ಕಂಡಕ್ಟರ್​, ಸೈಕಲ್​ ಟೈರ್​ಗೂ ಟಿಕೆಟ್​ ನೀಡಿರುವುದು ಬೆಳಕಿಗೆ ಬಂದಿದೆ.

ರಾಣಿಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ನಂಬರಿನ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಮೇಶ್ ಪಾಟೀಲ್​​ ಎಂಬುವರು ತಮ್ಮ ಮಗನ ಜತೆ ತಮ್ಮ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಗನ ಸೈಕಲ್​ಗೆಂದು ತಂದ ಟೈರ್​ಗೂ ಕಂಡಕ್ಟರ್​ ಟಿಕೆಟ್ ನೀಡಿದ್ದಾರೆ.

Umesh Patil with Tyre

ಟಿಕೆಟ್​ ದರ ಒಬ್ಬರಿಗೆ 35 ರೂಪಾಯಿ. ತಂದೆ ಮತ್ತು ಮಗ ಇಬ್ಬರಿಗೆ 70 ರೂಪಾಯಿ ಆಗುತ್ತದೆ. ಆದರೆ, ಟೈರ್​ಗೂ 5 ರೂ. ಸೇರಿಸಿ ಒಟ್ಟು 75 ರೂ. ಟಿಕೆಟ್​ ನೀಡಲಾಗಿದೆ. ಟಿಕೆಟ್​ನಲ್ಲಿ ಲಗೇಜ್​ ಯೂನಿಟ್​ 1 ಎಂದು ಉಲ್ಲೇಖಿಸಿ 5 ರೂ. ಚಾರ್ಜ್​ ಮಾಡಿದ್ದಾರೆ.

ಟೈರ್​ಗೂ ಏಕೆ ಟಿಕೆಟ್​ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕ ಉಮೇಶ್ ಪಾಟೀಲ್​ ಪ್ರಶ್ನೆ ಮಾಡಿದರೆ ನಮಗೆ ಮೇಲಿಂದ ಅದೇಶ ಬಂದಿದೆ ಎಂದು ಕಂಡಕ್ಟರ್​ ಸಮರ್ಥನೆ ನೀಡಿದ್ದಾರೆ.

KSRTC Ticket to bicycle Tyre

ಇನ್ನು ಕೆಎಸ್​ಆರ್​ಟಿಸಿಯ ನಿಮಯದ ಪ್ರಕಾರ ಪ್ರತಿ ಪ್ರಯಾಣಿಕರು 30 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ. ಅದಕ್ಕಿಂತ ಹೆಚ್ಚು ತೂಕದ ಲಗೇಜ್​ ತೆಗೆದುಕೊಂಡು ಹೋಗಿದಲ್ಲಿ ನಿಗದಿತ ತೂಕವನ್ನು ಬಿಟ್ಟು ಉಳಿದ ಹೆಚ್ಚುವರಿ ತೂಕಕ್ಕೆ ದರ ವಿಧಿಸಲಾಗುತ್ತದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net