ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ.27ರಿಂದ ಏ.7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲಿರುವವರ ಬೃಹತ್ ಸಮಾವೇಶ ಜ. 19ರಂದು ಮಧ್ಯಾಹ್ನ 3ಕ್ಕೆ ದೇವಾಲಯ ವಠಾರದಲ್ಲಿ ಜರುಗಲಿರುವುದು. ಸ್ವಯಂಸೇವಕರಾಗಿ ಭಾಗವಹಿಸಲಿಚ್ಛಿಸುವವರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.