ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

murder madhugiri
Published on

ತುಮಕೂರು: ನನ್ನ ಪತ್ನಿ ಕಾಣೆಯಾಗಿದ್ದಾಳೆ. ಹುಡುಕಿಕೊಡಿ ಎಂದು 15 ದಿನಗಳ ಹಿಂದೆ ಖುದ್ದಾಗಿ ಗಂಡನೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ. ಇದರನ್ವಯ ತನಿಖೆ ಕೈಗೊಂಡ ಪೊಲೀಸರೂ ಅರೆಕ್ಷಣ ಶಾಕ್​ ಆಗಿದ್ದಾರೆ. ನಾಪತ್ತೆಯಾಗಿದ್ದಾಳೆ ಎನ್ನಲಾದ ಯುವತಿಯನ್ನ ಗಂಡನೇ ಕೊಂದು ಮನೆಯಲ್ಲೇ ಶವ ಹೂತು ಹಾಕಿದ್ದ!

ಇಂತಹ ಘಟನೆ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ನಡೆದಿತ್ತು ತಡವಾಗಿ ಬೆಳಕಿಗೆ ಬಂದಿದೆ. ನೂರಾರು ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತೆಯ ಬದುಕು ಮದುವೆ ಆದ ಹತ್ತು ತಿಂಗಳಿಗೆ ಗಂಡ ನರಸಿಂಹಮೂರ್ತಿಯಿಂದಲೇ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿರಿ ಗಂಡ-ಮಕ್ಕಳನ್ನು ಬಿಟ್ಟು ಬರಲು ಒಪ್ಪದ ಮಹಿಳೆ ಬದುಕು ದುರಂತ ಅಂತ್ಯ

10 ತಿಂಗಳ ಹಿಂದಷ್ಟೇ ನರಸಿಂಹಮೂರ್ತಿ ಜತೆ ಕೊಲೆಯಾದ ಯುವತಿಯ ಮದುವೆ ಆಗಿತ್ತು. ನರಸಿಂಹಮೂರ್ತಿಯೇ ಪತ್ನಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟು 15 ದಿನಗಳ ಹಿಂದೆ ಪತ್ನಿ ಕಾಣಿಸುತ್ತಿಲ್ಲ ಎಂದು ದೂರು ದಾಖಲಿಸಿದ್ದ.

ನರಸಿಂಹಮೂರ್ತಿ ಮೇಲೆಯೇ ಅನುಮಾನಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಆಕೆ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಳಿಗೆ 18 ವರ್ಷ ತುಂಬಿರಲಿಲ್ಲ. ಆಗಲೇ ಆತ ಬಾಲ್ಯ ವಿವಾಹ ಮಾಡಿಕೊಂಡಿದ್ದ ಎಂಬ ಮಾತೂ ಕೇಳಿಬಂದಿದೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net