ಮಾದಾರ ಚನ್ನಯ್ಯ ಶ್ರೀ ಜನ್ಮದಿನಾಚರಣೆ

madar
Published on

ಹೊಳಲ್ಕೆರೆ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಜನ್ಮದಿನ ಹಿನ್ನೆಲೆಯಲ್ಲಿ ಪಟ್ಟಣದ ಲಯನ್ಸ್ ಕ್ಲಬ್ ಸೇರಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು.

ಆಸ್ಪತ್ರೆ ಎದುರು ನೇತ್ರ ಉಚಿತ ತಪಾಸಣೆ ಹಾಗೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಮೋಹನ್ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ವಕೀಲ ಎಸ್.ವೇದಮೂರ್ತಿ, ಪುರಸಭೆ ಸದಸ್ಯ ಬಿ.ಎಸ್.ರುದ್ರಪ್ಪ, ಶರತ್ ಕುಮಾರ್ ಪಾಟೀಲ್, ಡಿ.ಆರ್.ಪಾಡುರಂಗಸ್ವಾಮಿ, ಜಾದು ಮೋಹನ್, ಎಚ್.ಬಿ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಪರಮೇಶ್ವರಪ್ಪ, ಹನುಮನಹಳ್ಳಿ ಮಂಜುನಾಥ, ನಾಗೇಂದ್ರಪ್ಪ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಿಜಯ್ ಸಜ್ಜನ್, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net