ಮದಗದ ಕೆಂಚಮ್ಮನ ಕೆರೆಗೆ ಸೆ. 1ರಂದು ಬಾಗಿನ

26 RTL-1 -MLA BANAKARA
Published on

ರಟ್ಟಿಹಳ್ಳಿ: ಮದಗದ ಕೆಂಚಮ್ಮನ ಕೆರೆಯ ಎಡ ಮತ್ತು ಬಲದಂಡೆಯ ಕಾಲುವೆ ಆಧುನೀಕರಣಕ್ಕೆ ಈಗಾಗಲೇ ಸರ್ಕಾರಕ್ಕೆ 69 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಕಳುಹಿಸಲಾಗಿದೆ. ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಮಿತಿಯನ್ನು ರಚಿಸಲಾಗುವುದು ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮದಗದ ಕೆಂಚಮ್ಮನ ಕೆರೆಗೆ ಬಾಗಿನ ಅರ್ಪಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸೆ. 1ರಂದು ಬೆಳಗ್ಗೆ 11 ಗಂಟೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ತಿಪ್ಪಾಯಿಕೊಪ್ಪ, ರಟ್ಟಿಹಳ್ಳಿ, ನಾಗವಂದ ಮತ್ತು ಹಾನಗಲ್ ತಾಲೂಕಿನ ಕೂಡದ ಮಠಗಳ ಶ್ರೀಗಳು ಆಗಮಿಸಲಿದ್ದಾರೆ, ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಬಾಗಿನ ಅರ್ಪಣೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿ.ಪಂ. ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ ಮಾತನಾಡಿ, ಕೆರೆಗಳು ಮತ್ತು ಕಾಲುವೆಗಳ ಅಭಿವೃದ್ಧಿಗೆ ಶಾಸಕರು ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಗಿನ ಅರ್ಪಣೆಯ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪಿ.ಡಿ. ಬಸನಗೌಡ್ರು, ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಜಿ.ಪಂ. ಮಾಜಿ ಸದಸ್ಯ ನಾರಾಯಣಪ್ಪ ಗೌರವಕ್ಕನವರ, ಮಂಜುನಾಥ ತಂಬಾಕದ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ಯು.ಎಂ. ಸಾಲಿ, ಎ.ಕೆ. ಪಾಟೀಲ, ರವೀಂದ್ರ ಮುದಿಯಪ್ಪನವರ, ಷಣ್ಮುಖಪ್ಪ ಚಳಗೇರಿ, ನಾಗನಗೌಡ ಪಾಟೀಲ, ವಿಜಯ ಅಂಗಡಿ, ಪರಮೇಶಪ್ಪ ಕಟ್ಟೇಕಾರ, ನಜೀರ ಸೈಕಲ್ಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net