ಸಮಾಜ ಪರಿವರ್ತನೆಗೆ ಶ್ರಮಿಸಿದ ಮಾಚಿದೇವರು

ಸಮಾಜ ಪರಿವರ್ತನೆಗೆ ಶ್ರಮಿಸಿದ ಮಾಚಿದೇವರು
Published on

ಹನಗೋಡು: ಮಡಿವಾಳ ಮಾಚಿದೇವ ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ್ದ ಮಹಾನ್ ಶರಣ ಎಂದು ಹನಗೋಡು ಮಡಿವಾಳ ಸಂಘದ ಅಧ್ಯಕ್ಷ ಹರೀಶ್ ತಿಳಿಸಿದರು.

ಹನಗೋಡಿನಲ್ಲಿ ಮಡಿವಾಳ ಸಂಘದಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರಲ್ಲಿಯೇ ಮಾಚಿದೇವರು ದಿಟ್ಟ ವ್ಯಕ್ತಿಯಾಗಿ ವಚನ ಸಾಹಿತ್ಯ ರಕ್ಷಿಸಿದವರು. ಇವರು ತಮ್ಮ ವಚನಗಳ ಮೂಲಕವೇ ಸಮ ಸಮಾಜಕ್ಕೆ ಹೋರಾಡಿ, ಬಟ್ಟೆಯ ಕೊಳೆಯನ್ನು ತೊಳೆದು ಶುಚಿಗೊಳಿಸುವಂತೆ ಗುರು ಜಂಗಮರು ಶಿಷ್ಯನ ಮನಸ್ಸನ್ನು ತೊಳೆದು ಉದ್ಧಸಬೇಕು ಎಂದು ಸಂದೇಶ ಸಾರಿದ ಮಹಾನ್ ಪುರುಷರು ಎಂದರು. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಚೆನ್ನಯ್ಯ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಸಿದ್ದರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ಬೋರೇಗೌಡ, ಗ್ರಾಪಂ ಸದಸ್ಯರಾದ ಸಂತೋಷ್ ಶಿವಣ್ಣ, ಸಂಘದ ನಿರ್ದೇಶಕರಾದ ಕುಮಾರ್, ಪ್ರಸನ್ನ, ನಂಜುಂಡ, ದರ್ಶನ್, ದೇವರಾಜ್ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net