ಬಸವಣ್ಣನ ನಂತರದ ಪ್ರಮುಖ ಸ್ಥಾನ ಪಡೆದ ಮಾಚಿದೇವ

ಬಸವಣ್ಣನ ನಂತರದ ಪ್ರಮುಖ ಸ್ಥಾನ ಪಡೆದ ಮಾಚಿದೇವ
Published on

ಸರಗೂರು: ಶರಣರಲ್ಲಿ ಅಲ್ಲಮ ಪ್ರಭು, ಬಸವಣ್ಣನವರ ನಂತರದ ಪ್ರಮುಖ ಸ್ಥಾನ ಪಡೆದ ಮಹಾನ್ ಪುರುಷರೆಂದರೆ ಮಡಿವಾಳ ಮಾಚಿದೇವರು. ಧರ್ಮ ಕ್ರಾಂತಿಯ ನೇತೃತ್ವ ವಹಿಸಿದ್ದ ಬಸವಣ್ಣನವರಿಗೆ ಅಷ್ಟೇ ಅಲ್ಲ, ಅಳಿದು ಹೋಗುತ್ತಿರುವ ವಚನಸಾಹಿತ್ಯಕ್ಕೆ ಅಂಗರಕ್ಷಕರಾಗಿ ನಿಂತವರು ಮಡಿವಾಳ ಮಾಚಿದೇವರು ಎಂದು ಸರಗೂರು ತಹಸೀಲ್ದಾರ್ ಮೋಹನಕುಮಾರಿ ಹೇಳಿದರು.

ತಾಲೂಕಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಮಾಚಿದೇವರ ಸಮಾಜದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಮಾಚಿದೇವರಿಗೆ ಅನುಭವ ಮಂಟಪಕ್ಕೆ ಬರುವ ಹೊಸಬರನ್ನು ಪರೀಕ್ಷಿಸಿ ಪರಿಶೀಲಿಸುವ ಮಹತ್ವದ ಜವಾಬ್ದಾರಿ ಇತ್ತು. ಕಲ್ಯಾಣ ಕ್ರಾಂತಿಯ ನಂತರ ಇಡೀ ವಚನ ಸಾಹಿತ್ಯವನ್ನು ನಾಶಪಡಿಸುವ ಹುನ್ನಾರವು ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಸ್ತ ಶರಣ-ಶರಣೆಯರ ಮತ್ತು ವಚನಸಾಹಿತ್ಯದ ರಕ್ಷಣೆಯ ಜವಾಬ್ದಾರಿಯನ್ನು ಅಣ್ಣ ಬಸವಣ್ಣನವರು ಮಾಚಿದೇವರಿಗೆ ವಹಿಸಿಕೊಟ್ಟರು. ಬಂದಂತಹ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಸಾಧ್ಯವಾದಷ್ಟು ಶರಣರ ದಂಡು ಮತ್ತು ವಚನ ಸಾಹಿತ್ಯದ ಮೂಲ ದಾಖಲೆಗಳನ್ನು ಉಳುವಿಗೆ ಸಾಗಿಸುವಲ್ಲಿ ಸಫಲರಾದರು. ಅಂತಹ ವೀರ ಶರಣರು ನಮ್ಮ ಕುಲಗುರುಗಳಾಗಿರುವುದು ಸುದೈವ ಎಂದರು.

ಮುಖ್ಯ ಭಾಷಣಕಾರರಾಗಿ ಶಿಕ್ಷಕ ರಮೇಶ್ ಮಾತನಾಡಿದರು. ತಾಲೂಕು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಧರಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಖಜಾಂಚಿ ನಂಜುಂಡ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಚಿಕ್ಕವನ್ನಶೆಟ್ಟಿ, ಗೌರವಾಧ್ಯಕ್ಷ ರಾಮ್ ಶೆಟ್ಟಿ, ರುದ್ರಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ನಾಗರಾಜು, ಶ್ರೀನಾಥ್, ಸರಗೂರು ಕೃಷ್ಣ, ಇರಾನ್ ರವಿ, ರಾಜುಬಂಡಳ್ಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗೇಂದ್ರಯ್ಯ, ಲಯನ್ಸ್ ಅಕಾಡೆಮಿ ಶಾಲೆ ಮುಖ್ಯ ಶಿಕ್ಷಕ ದಾಸಚಾರಿ, ಗ್ರೇಡ್ 2 ತಹಶೀಲ್ದಾರ್ ಪರಶಿವಮೂರ್ತಿ, ಉಪತಹಸೀಲ್ದಾರ್ ರವಿಂದ್ರ, ಆರ್.ಐ. ಮುಜೀಬ್, ಶ್ರೀನಿವಾಸ್, ಎಲ್ಲಾ ಗ್ರಾಮದ ಮಡಿವಾಳ ಸಾಮಾಜದ ಯಜಮಾನರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net