

ಹನೂರು: ಪಟ್ಟಣದ ವಿವಿಧೆಡೆ ಶುಕ್ರವಾರ ಶಾಸಕ ಎಂ.ಆರ್. ಮಂಜುನಾಥ್ ಅವರ 53ನೇ ವರ್ಷದ ಹುಟ್ಟಹಬ್ಬವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ನಿವಾಸಕ್ಕೆ ಆಗಮಿಸಿದ ನೂರಾರು ಕಾರ್ಯಕರ್ತರು ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರ ಜತೆಗೆ ಕೇಕ್ ಕತ್ತರಿಸಿ ಸಿಹಿ ತಿನಿಸಿದರು. ಹಾಗೆಯೇ ಪಟ್ಟಣದ ವಿವಿಧ ಬಡಾವಣೆಗೆ ತೆರಳಿದ ಶಾಸಕರಿಗೆ ಕಾರ್ಯಕರ್ತರು ಕೇಕ್ ಕತ್ತರಿಸಿ ಶುಭಾಶಯ ಕೋರಿದರು.
ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಪತ್ನಿ ನಂದಿನಿ ಹಾಗೂ ಕಾರ್ಯಕರ್ತರೊಂದಿಗೆ ತೆರಳಿದ ಶಾಸಕರು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನೆರೆದಿದ್ದವರಿಗೆ ಪಂಚಾಮೃತ ಹಾಗೂ ಸಿಹಿ ವಿತರಿಸಿದರು. ಈ ವೇಳೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡ ಚನ್ನಾಲಿಂಗನಹಳ್ಳಿ ವೆಂಕಟೇಶ್, ವಿಜಯಕುಮಾರ್ ಹಾಗೂ ಇನ್ನಿತರರು ಇದ್ದರು.