ಯಜಮಾನರಾಗಿ ಎಂ.ಪಾಪಣ್ಣ ಆಯ್ಕೆ

17-KGLPHOTO-5,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 51;
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಹುಚ್ಚಾಲಮ್ಮ ದೇವರ ದೊಡ್ಡಹಟ್ಟಿಯ ಕಸಬಾ ಮನೆ (ಪರಿಶಿಷ್ಟ ಜಾತಿ) ಯಜಮಾನರಾಗಿ ಎಂ.ಪಾಪಣ್ಣ ಆಯ್ಕೆಯಾದರು.


ಭೀಮನಗರದ ದಿಡ್ಡದಕೇರಿಯ ಚೌಡಮ್ಮನ ಗುಡಿಯಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಿದ್ದ ಹುಚ್ಚಾಲಮ್ಮನ ಒಕ್ಕಲಿನ ಕುಲಸ್ಥರ ಸಭೆಯಲ್ಲಿ ಹಿರಿಯರು ಹಾಗೂ ಮುಖಂಡರ ಸಲಹೆ ಹಾಗೂ ಒಮ್ಮತದ ತೀರ್ಮಾನದಂತೆ ಎಂ.ಪಾಪಣ್ಣ ಅವರನ್ನು ಆಯ್ಕೆ ಮಾಡಲಾಯಿತು.


ಹಿರಿಯ ಮುಖಂಡ ಚಿಕ್ಕಮಾಲಿಗಯ್ಯ ಮಾತನಾಡಿ, ಮುಂದೆ ದಲಿತ ಸಮುದಾಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಮಾಜಿ ಯಜಮಾನರಾದ ಸಿದ್ದಪ್ಪಣ್ಣ, ಪ್ರಭು, ಹುಚ್ಚಪ್ಪ, ವಿಜಯಕುಮಾರ್, ಸಿದ್ದರಾಜು, ಹಿರಿಯ ಮುಖಂಡ ಚಿಕ್ಕಮಾಲಗಯ್ಯ, ಮುಖಂಡರಾದ ರಾಜೇಶ್, ನಾಗಣ್ಣ, ಶೇಖರ್, ಶಿವು, ಪುಟ್ಟರಾಜು, ಮಲ್ಲು, ಕುಮಾರ್, ಮೂರ್ತಿ, ಚಂದ್ರು, ನವೀನ್, ಶ್ರೀಧರ್, ಲಿಂಗರಾಜು, ರಾಮಚಂದ್ರ, ಮಹಾಲಿಂಗ, ಯುವ ಮುಖಂಡರಾದ ರಂಜನ್, ಪೃಥ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net