ಸಿಲಿಂಡರ್ ಸಬ್ಸಿಡಿ ಲೋಕಸಭೆ ಚುನಾವಣೆ ಗಿಮಿಕ್ : ಕೇಂದ್ರ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Priyank Kharge
Published on

ನಾವು ಮಾಡಿದರೆ ದಿವಾಳಿತ ಬಿಜೆಪಿ ಮಾಡಿದ್ದರೆ ಆರ್ಥಿಕ ಸಮಾನತೆಯಂತೆ ವ್ಯಂಗ್ಯವಾಡಿದ ಗ್ರಾಮೀಣಾಭಿವೃದ್ಧಿ ಸಚಿವರು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೇಂದ್ರ ಸರ್ಕಾರವು ಅಡುಗೆ ಅನಿಲ್ ಸಿಲಿಂಡರ್ (ಎಲ್‌ಪಿಜಿ) ಪ್ರತಿಯೊಂದಕ್ಕೆ ೨೦೦ ರೂ. ಸಬ್ಸಿಡಿ ನೀಡಿರುವುದು ಸದ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಯ ಗಿಮಿಕ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಕರ್ತರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ಅಡುಗೆ  ಅನಿಲ್ ಸಿಲಿಂಡರ್‌ಗೆ ಸಬ್ಸಿಡಿ ಘೋಷಣೆ ಮಾಡಿದೆ. ನಾವು ಶಕ್ತಿ, ಭಾಗ್ಯಲಕ್ಷಿö್ಮÃ, ಗೃಹ ಲಕ್ಷಿö್ಮÃ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದರೆ, ಬಿಜೆಪಿಯವರು ನಾವು ಮಾಡುತ್ತಿರುವ ಕಾರ್ಯಕ್ರಮಗಳು  ಆರ್ಥಿಕ ದಿವಾಳಿತನ ಮಾಡುವಂತವು ಆಗಿವೆ ಎನ್ನುತ್ತಾರೆ. ಆದರೆ,  ಅವರು ಮಾಡಿದರೆ ಆರ್ಥಿಕ ಸಮಾನತೆ ಅಂತ ಹೇಳುತ್ತಾರೆ ಎಂದು ಕೇಸರಿಪಡೆ ಹಾಗೂ ಕೇಂದ್ರ ಟೀಕಾ ಪ್ರಹಾರ ಮಾಡಿದರು.
 ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆ ಹಿನ್ನೆಲೆಯಲ್ಲಿ  ಸಬ್ಸಿಡಿ ಘೋಷಣೆ ಮಾಡಿz್ದÁರೆ. ಅವರಿಗೆ ಮಹಿಳೆಯರ ಆರ್ಥಿಕ ಸಮಾನತೆ ಅವಶ್ಯಕತೆ ಬೇಕಾಗಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ಮೇಲೆ ಇಂಪ್ಯಾಕ್ಟ್ ಬೀರಿವೆ. ಹೀಗಾಗಿಯೇ ಸಬ್ಸಿಡಿ ಘೋಷಿಸಿದ್ದರೆ ಎಂದರು.
ಇಷ್ಟು ದಿನ ಬಿಜೆಪಿಯವರಿಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಕೇವಲ ಅದಾನಿ,ಅಂಬಾನಿ ಮಾತ್ರ ಕಾಣುತ್ತಿದ್ದರು. ಅವರಿಗಾಗಿಯೇ ಕೇಂದ್ರ ಸರ್ಕಾರ ಇದ್ದಂತೆ ವರ್ತಿಸುತ್ತಿದ್ದರು. ಆದರೆ, ಕ್ರಮೇಣವಾಗಿ ಒಂದೊAದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿದೆ. ಹೀಗಾಗಿ ಕೆಲವು ಗಿಮಿಕ್ ಮಾಡಲು ಬಿಜೆಪಿ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ತಂದೆಯವರನ್ನು ನೋಡಿ ಕಲಿಯಲಿ ಎಂದು ಹೇಳಿರುವ ಸಂಸದ ಡಾ.ಉಮೇಶ ಜಾಧವ್ ಹೇಳಿಕೆ  ತೀಕ್ಷಣವಾಗಿ ಪ್ರತಿಕ್ರಿಯಿಸಿ, ನಾನು ಮಲ್ಲಿಕಾರ್ಜುನ ಅ¯್ಲÁ, ಅವರಂತೆ ಆಗ  ಆಗಲು ಸಾಧ್ಯವಿಲ್ಲ. ನಾನು ಸಂವಿಧಾನದAತೆ ಮಾತನಾಡಿದರೆ. ದರ್ಪದ ಮಾತು ಅಂತ ಹೇಳುತ್ತಾರೆ ಎಂದು ತಿರುಗೇಟು ನೀಡಿದರು. ಕಾನೂನು ವಿರುದ್ಧ ನಡೆದುಕೊಳ್ಳುವವರನ್ನು  ಮೆರವಣಿಗೆ ಮಾಡಲು ಆಗಲ್ಲ. ಹೀಗಾಗಿ ಅವರನ್ನು ಒದ್ದು ಒಳಗೆ ಹಾಕಿ ಅಂತ ಹೇಳಿz್ದೆÃನೆ. ಅದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net