ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳು ನಾಪತ್ತೆ; ತೀವ್ರ ಹುಡುಕಾಟ ನಡೆಸಿದರೂ ಇದುವರೆಗೂ ಆಗಿಲ್ಲ ಪತ್ತೆ

Lovers
Published on

ಉತ್ತರ ಕನ್ನಡ: ಸೆಲ್ಫಿ ಕ್ರೇಜ್​ನಲ್ಲಿ ಸಂಭವಿಸಿದ ಅವಘಡಗಳ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದ್ದು, ಇದೀಗ ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳಿಬ್ಬರು ನಾಪತ್ತೆಯಾಗಿದ್ದಾರೆ. ತೀವ್ರ ಹುಡುಕಾಟ ನಡೆಸಲಾಗಿದ್ದರೂ ಇನ್ನೂ ಅವರ ಬಗ್ಗೆ ಸುಳಿವು ಸಿಕ್ಕಿಲ್ಲ.

ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ಬಳಿ ಈ ದುರಂತ ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಅತಿ ದೊಡ್ಡ ಅಣೆಕಟ್ಟು ಸೂಪಾ ಬಳಿ ಸೆಲ್ಫಿ ತೆಗೆಯುವಾಗ ಅವಘಡ ನಡೆದುಹೋಗಿದೆ. ಸೆಲ್ಫಿ ತೆಗೆಯುತ್ತಿದ್ದ ಪ್ರೇಮಿಗಳಿಬ್ಬರು ಕಾಳಿ ಸೇತುವೆ ಕೆಳಗೆ ನೀರಿಗೆ ಬಿದ್ದಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕದಳದವರು ಅಣೆಕಟ್ಟು ಎದುರಿನ ನದಿಯ ನೀರಿನಲ್ಲಿ ಹುಡುಕಾಟ ನಡೆಸಿದ್ದರೂ ಪ್ರೇಮಿಗಳ ಸುಳಿವು ಸಿಕ್ಕಿಲ್ಲ. ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದು ಇದುವರೆಗೂ ಪ್ರೇಮಿಗಳು ಪತ್ತೆಯಾಗಿಲ್ಲ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net