ಪ್ರೀತಿ, ವಿಶ್ವಾಸ ಗಟ್ಟಿಗೊಳಿಸಲು ಜಾತ್ರೆ ಸಹಕಾರಿ

30Anklagi1
Published on

ಅಂಕಲಗಿ: ಹಬ್ಬ&ಹರಿದಿನ ಹಾಗೂ ಜಾತ್ರೆ&ಉತ್ಸವ ಪರಸ್ಪರ ಪ್ರೀತಿ ವಿಶ್ವಾಸ ಗಟ್ಟಿಗೊಳಿಸಲು ಸಹಕಾರಿಯಾಗಿವೆ. ಹೀಗಾಗಿ, ಎಲ್ಲರೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಸಮೀಪದ ಗೊಡಚಿನಮಲ್ಕಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯ ಸುಭಾಷ ಪಾಟೀಲ, ಮಂಡಳ ಅಧ್ಯ ರಾಜೇಂದ್ರ ಗೌಡಪ್ಪಗೋಳ, ನಗರ ಟಕದ ಅಧ್ಯ, ಭೀಮಶಿ ಭರಮನ್ನವರ, ಮುಖಂಡ ಸುರೇಶ ಸನದಿ, ಮಹಾಂತೇಶ ಅವರಗೋಳ, ಬಾಬಾಜಾನ ದೇಸಾಯಿ, ಬಸಲಿಂಗಪ್ಪ ಅಂಕಲಗಿ, ಬಸವಣ್ಣಿ ಜರಳಿ, ಬಾಳ ಗುಂಡ ಮಾನಗಾವಿ, ಅಶೋಕ

ಮಳ್ಳಪ್ಪಗೋಳ, ಪ್ರೇಮಾ ಚಿಕ್ಕೋಡಿ, ಡಾ.ಬಸವರಾಜ ಕೊಣ್ಣೂರ, ಬಶೀರಹುಸೇನ್​ ದೇಸಾಯಿ, ಬಾಳಯ್ಯ ನಾಯಿಕ, ಯಲ್ಲಪ್ಪ ಕಳ್ಳಿಬದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net