ಪೊಲೀಸ್ ಬಂಧನದಲ್ಲಿ ನವವಿವಾಹಿತರು; ಮೊನ್ನೆಮೊನ್ನೆಯಷ್ಟೇ ಮದುವೆಯಾದವಳ ವಿರುದ್ಧ ಕಳ್ಳತನ ಆರೋಪ

lovejihad
Published on

ಮಂಗಳೂರು: ಮೊನ್ನೆಮೊನ್ನೆಯಷ್ಟೇ ನಡೆದ ವಿಚಿತ್ರ ಲವ್ ಜಿಹಾದ್​ ಪ್ರಕರಣದಲ್ಲಿ ಮದುವೆಯಾಗಿರುವ ದಂಪತಿ ಇದೀಗ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ನವವಿವಾಹಿತ ಸತಿ-ಪತಿ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನವ ವಿವಾಹಿತ ರೇಷ್ಮಾ ಹಾಗೂ ಅಕ್ರಂ ಬಂಧಿತ ಆರೋಪಿಗಳು. ದಂಪತಿಯ ವಿರುದ್ಧ ಕಳ್ಳತನದ ಆರೋಪದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಬರ್ಕೆ ಠಾಣೆ ಪೊಲೀಸರು ಇವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಹಜರತ್ ಅಲಿಯಾಸ್ ಯಶೋದಳ ಪುತ್ರಿ ರೇಷ್ಮಾ, ಯಶೋದಳ ಅಕ್ಕನ ಮಗ ಗದಗದ ಅಕ್ರಂ ಎಂಬಾತನನ್ನು ಮದುವೆಯಾಗಿದ್ದು, ಮದುವೆಯಾಗಿ ಮಂಗಳೂರಿಗೆ ಆಗಮಿಸಿದ್ದಳು. ಯಶೋದಳಿಗೆ ಗೊತ್ತಿಲ್ಲದಂತೆ ರೇಷ್ಮಾಳ ಮನವೊಲಿಸಿದ್ದ ಯಶೋದಳ ಮನೆಯವರು, ರೇಷ್ಮಾ ಬಳಿ ಮನೆಯಲ್ಲಿದ್ದ ಚಿನ್ನಾಭರಣ ತರುವಂತೆ ಹೇಳಿದ್ದರು. ಹೀಗಾಗಿ ಆಕೆ ಚಿನ್ನಾಭರಣಗಳ ಸಮೇತ ಹೋಗಿ ಮದುವೆಯಾಗಿದ್ದರಿಂದ ದಂಪತಿ ವಿರುದ್ಧ ಕಳ್ಳತನ ಆರೋಪದ ದೂರು ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net