ಕುಡಿತ ಬಿಟ್ಟಾಗ ಕುಟುಂಬದ ಮೇಲೆ ಪ್ರೀತಿ: ಡಾ.ಡಿ.ವೀರೇಂದ್ರ ಹೆಗ್ಗಡೆ ಕಿವಿಮಾತು

virendra heggade
Published on

ಬೆಳ್ತಂಗಡಿ: ಪ್ರಾರ್ಥನೆ ಮತ್ತು ಮನಃಪರಿವರ್ತನೆಯಿಂದ ಮದ್ಯವರ್ಜನೆಗೆ ಸಹಕಾರಿಯಾಗುತ್ತದೆ. ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ದೊರಕುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 241ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿ 60 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಧರ್ಮಸ್ಥಳದ ಮಹಾವೀರ ಅಜ್ರಿ, ಧನಕೀರ್ತಿ ಆರಿಗ, ಜಾಗೃತಿ ಸೌಧದ ಪ್ರಬಂಧಕ ಕಿಶೋರ್‌ಕುಮಾರ್, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ಎಸ್.ಎಸ್. ಶಿಬಿರಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ಮತ್ತು ಸಲಹೆ ನೀಡಿದರು. ಕಾರ್ಯದರ್ಶಿ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಕುಮಾರ್ ಟಿ, ಆರೋಗ್ಯ ಸಹಾಯಕಿ ಸೌಮ್ಯಾ, ಶಿಬಿರದ ಆಪ್ತ ಸಲಹೆಗಾರ ಮಧು ಜಿ.ಆರ್. ಸಹಕರಿಸಿದರು. ಮುಂದಿನ ವಿಶೇಷ ಶಿಬಿರ ಫೆ.17ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net