

ಮಧೂರು: ಉಳಿಯ ಮನೆತನದ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ದೇಶಮಂಗಲ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೂತನ ಸಮಿತಿ ರಚಿಸಲಾಯಿತು.
ಕ್ಷೇತ್ರ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ, ರವೀಂದ್ರ ಆಳ್ವ ಕೋಟೆಕುಂಜ, ಕೆ.ಎನ್.ವೆಂಕಟ್ರಮಣ ಹೊಳ್ಳ, ನಾರಾಯಣ ಪೂಜಾರಿ ಪುತ್ತೂರು ಕೊಟ್ಯ, ಸೀನ ಶೆಟ್ಟಿ ಕಜೆ, ವಕೀಲ ಲಕ್ಷ್ಮಣ್ ನೋಂಡ ಕೋಟೆಕುಂಜ, ಬಾಲಕೃಷ್ಣ ನಾಯರ್, ರಾಮಕೃಷ್ಣ ಸಂತಡ್ಕ, ಮೋಹನ್ ಕುಮಾರ್ ರೈ ಅಡ್ಕ ಮೊದಲಾದವರು ಮಾಹಿತಿ ನೀಡಿದರು. ಸಮಿತಿ ಗೌರವಾಧ್ಯಕ್ಷರಾಗಿ ಕ್ಷೇತ್ರದ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಾವು, ಕಾರ್ಯಾಧ್ಯಕ್ಷರಾಗಿ ರವೀಂದ್ರ ಆಳ್ವ ಕಂಬಾರ್, ಜಯರಾಮ ರೈ ಸಿರಿಬಾಗಿಲು ಹಾಗೂ ಗಣೇಶ ಭಂಡಾರಿ ಮಾಯಿಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಎಂ.ಬಿ.ಆಚಾರ್, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಕಾರಂತ್, 18 ಮಂದಿ ಉಪಾಧ್ಯಕ್ಷರು, 14 ಮಂದಿ ಕಾರ್ಯದರ್ಶಿಗಳು ಹಾಗೂ ಇಬ್ಬರು ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಲಾಯಿತು. ಗಾಯತ್ರಿ ಕಾರಂತ ಹಾಗೂ ಶರಣ್ಯ ಮಾಲತಿ ಕಾರಂತ ಪ್ರಾರ್ಥಿಸಿದರು. ದೇಶಮಂಗಲ ಪ್ರಭಾಕರ ಕಾರಂತ ಸ್ವಾಗತಿಸಿದರು. ಪ್ರಸನ್ನ ಕೃಷ್ಣ ಕಾರಂತ ನಿರೂಪಿಸಿಸಿದರು. ಬಳಿಕ ಶಂಕರನಾರಾಯಣ ಹಾಗೂ ಕುಟ್ಟಿಚಾತ ದೇವರಿಗೆ ಮಹಾಪೂಜೆ ನಡೆಯಿತು.