

ಪ್ರಿಯಕರನ ತಮ್ಮನ ಹತ್ಯೆ | ಹೆಣ್ಣು ಕೇಳಲು ಹೋಗಿದ್ದಕ್ಕೆ ಆಕ್ರೋಶಗೊಂಡ ಸಹೋದರ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಪ್ರೇಮ ಪ್ರಕರಣವೊಂದು ಪ್ರಿಯಕರನ ತಮ್ಮನ ಕೊಲೆಯಲ್ಲಿ ಅಂತ್ಯಗೊAಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಡಿ ಗ್ರಾಮ ಮಮ್ಮಲು ಮರುಗಿದೆ.
ಸುಮಿತ್ ನಾಗೇಂದ್ರ (೧೯) ಕೊಲೆಯಾಗಿರುವ ಯುವಕ.
ಕೊಲೆಯಾಗಿರುವ ಸುಮಿತ್‌ನ ಸಹೋದರ ಸಚಿನ್ ಮಲ್ಲಾಬಾದ, ಮನೆಯ ಪಕ್ಕದಲ್ಲಿಯೇ ಇದ್ದ ಯುವತಿ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಒಂದೇ ಸಮುದಾಯದವರು.ಪೋಷಕರು ಕೆಲಸಕ್ಕಾಗಿ ಮುಂಬಯಿಗೆ ಹೋಗಿದ್ದರು. ಇಬ್ಬರು ಸಹೋದರರು, ಸಹೋದರತ್ತೆಯ ಮನೆಯಲ್ಲಿ ಇರುತ್ತಿದ್ದರು.
ಇಬ್ಬರು ಪ್ರೀತಿಸುತ್ತಿದ್ದರು. ಈ ವಿಷಯ ಹೆತ್ತವರಿಗೆ ತಿಳಿಸಿದ್ದಾರೆ. ಮುಂಬಯಿನಿAದ ಬಂದಿದ್ದವರು ಸಹಜವಾಗಿ ಹುಡುಗಿಯ ಮನೆಯವರು ಗೊತ್ತಿದ್ದವರಲ್ಲ. ಹೆಣ್ಣು ಕೇಳೋಣ ಎಂದು ಎಲ್ಲರು ಸೇರಿಕೊಂಡು ಹೋಗಿ ಹೆಣ್ಣು ಕೊಡುವಂತೆ ಕೇಳಿದ್ದಾರೆ. ಕೊಡಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಬೆಳವಣಿಗೆ ಆಕೆಯ ಸಹೋದರ ಹಾಗೂ ಮನೆಯವರನ್ನು ಕೆರಳಿಸಿತ್ತು.
ಇದರಿಂದಾಗಿ ಸಿಟ್ಟಿಗೆದ್ದ ಯುವತಿಯ ಸಹೋದರ ವರುಣ ರಾಜಕುಮಾರ, ಸಚಿನ್‌ನನ್ನು ಹುಡುಕಿಕೊಂಡು ಶುಕ್ರವಾರ ಸಂಜೆ ಆತನ ಮನೆಗೆ ಹೋಗಿದ್ದಾನೆ. ಮನೆಯ ಬಾಗಿಲು ಬಡಿದಾಗ ಆತನ ಸಹೋದರ ಸುಮಿತ್ ಬಾಗಿಲು ತೆರೆದಿದ್ದಾನೆ. ನಿನ್ನ ಅಣ್ಣ ಎಲ್ಲಿ ಎಂದು ಕೇಳಿದಾಗ ಮನನೆಯಲ್ಲಿ ಇಲ್ಲ ಎಂದು ಹೇಳಿದ್ದರಿಂದ ಆತನ ಬಳಿಯಿದ್ದ ಚಾಕುವಿನಿಂದ ಸುಮಿತ್‌ಗೆ ಇರಿದು ಪರಾರಿಯಾಗಿದ್ದಾನೆ ಎಂದು ೆÆಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಜಿಮ್ಸ್ ಆವರಣದಲ್ಲಿರುವ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾನೆ. ತಾಯಿ ಶೋಭಾ ಅವರು, ಆರೋಪಿತರಾದ ವರುಣ, ಸಿದ್ದು, ರಾಜಕುಮಾರ ಇತರೆ ೮ ಜನರ ವಿರುದ್ಧ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಕನ್ನಿಕಾ ಸಿಕ್ರಿವಾಲ್,ಎಸಿಪಿ ರಾಜಣ್ಣ, ಇನ್‌ಸ್ಪೆಕ್ಟರ್ ಸುಶೀಲಕುಮಾರ, ಪಿಎಸ್‌ಐ ಅನಿಲ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಬಂಧನಕ್ಕೆ ಜಾಲ ಬಿಸಲಾಗಿದೆ.