

ತುಮಕೂರು: ಪ್ರೀತಿಯಲ್ಲಿ ಸರಸ-ವಿರಸ. ಕೋಪಕ್ಕೆ ಬುದ್ಧಿ ಕೊಟ್ಟರೆ ಅಲ್ಲೋಲಕಲ್ಲೋಲವೇ ಆಗಬಹುದು. ಆದರೆ ಇಲ್ಲೊಬ್ಬ ಪ್ರಿಯತಮ ನಾಲಗೆ ಹರಿಬಿಟ್ಟಿದ್ದು, ನೊಂದ ಪ್ರಿಯತಮೆ ವಿಷ ಕುಡಿದು ದುರಂತ ಅಂತ್ಯ ಕಂಡ ದುರ್ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಫರ್ಹಾನ(19) ಮೃತ ದುರ್ದೈವಿ. ತುಮಕೂರು ನಗರದ ಕ್ಯಾತಸಂದ್ರದ ಗಿರಿನಗರದಲ್ಲಿ ಈ ಘಟನೆ ಸಂಭವಿಸಿದೆ. ಕಳೆದ 4 ವರ್ಷದಿಂದ ಫರ್ಹಾನ ಮತ್ತು ನೈಮನ್ ಪ್ರೀತಿಸುತ್ತಿದ್ದರು. ಇದನ್ನೂ ಓದಿರಿ ಚಲಿಸುತ್ತಿದ್ದ ಕಾರುಗಳು ರಸ್ತೆಯಲ್ಲೇ ಧಗಧಗ! 24 ಗಂಟೆಯಲ್ಲಿ 2 ಕಾರು ಬೆಂಕಿಗೆ ಆಹುತಿ
ಇತ್ತೀಚಿಗೆ ನೈಮನ್ ತನ್ನ ಪ್ರೇಯಸಿಯ ನಡವಳಿಕೆ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಎನ್ನಲಾಗಿದೆ. ಪ್ರಿಯಕರನ ಮಾತಿನಿಂದ ನೊಂದ ಯುವತಿ ಫೆ.5ರಂದು ವಿಷ ಕುಡಿದಿದ್ದಳು.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ ಚಿಕಿತ್ಸೆ ಫಲಿಸದೆ ಇಂದು(ಮಂಗಳವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯಕರ ನೈಮನ್ನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.