ಲಾಟರಿ ಹಣ ಗೆದ್ದಿದ್ದಕ್ಕೆ 1.58 ಲಕ್ಷ ರೂ ನಷ್ಟ

ಲೊತತೆರಯ
Published on

ಚಿಕ್ಕಬಳ್ಳಾಪುರ: ಬಂಪರ್ ಬಹುಮಾನದ ಹೆಸರಿನಲ್ಲಿ ಕರೆ ಮಾಡಿ ವಂಚಿಸುತ್ತಿರುವ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಲು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಜನರು ಮೋಸ ಹೋಗುತ್ತಿದ್ದಾರೆ. ಜಿಲ್ಲೆಯಲ್ಲೂ ಜಾಕ್ಸನ್ ಕಂಪನಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಖದೀಮರು ಪಂಗನಾಮ ಹಾಕಿದ್ದಾರೆ.

ಶಿಡ್ಲಘಟ್ಟ ನಗರದ ಕೇಶವ (37) ಎಂಬುವರೇ ವಂಚನೆಗೊಳಗಾದವರು. ಬಹುಮಾನ ಆಸೆಯಲ್ಲಿ ಅಪರಿಚಿತರ ಮಾತನ್ನು ನಂಬಿ, 1.58 ಲಕ್ಷ ರೂಗಳನ್ನು ಕಳೆದುಕೊಂಡಿದ್ದಾರೆ. ರಾಕ್ಸ್ ಜಾನ್ಸನ್ ಕಂಪನಿಯಿಂದ 10.72 ಲಕ್ಷ ರೂ ಲಾಟರಿ ಹಣ ಗೆದ್ದಿದ್ದೀರಿ. ನಿಮ್ಮ ಬ್ಯಾಂಕ್ ಖಾತೆಗೆ ಈ ಹಣವನ್ನು ಜಮಾ ಮಾಡಲು ತೆರಿಗೆ ಪಾವಿಸಬೇಕು ಎಂಬ ಮಾತನ್ನು ಅಪರಿಚಿತರು ಮೊಬೈಲ್ ಗೆ ಕರೆ ಮಾಡಿ ಹೇಳಿದ್ದಾರೆ. ನಾಲ್ಕೈದು ಹಂತಗಳಲ್ಲಿ 1.58 ಲಕ್ಷ ರೂಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ. ಇಷ್ಟಾದರೂ ಹಣಕ್ಕೆ ಬೇಡಿಕೆಯಿಡುತ್ತಲೇ ಬಂದಿದ್ದಾರೆ. ಕೊನೆಗೆ ಬಹುಮಾನದ ಹಣ ನೀಡಲು ಸತಾಯಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಶವ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net