

ಇಳಕಲ್ಲ: ಕಳೆದು ಹೋದ ಮಗುವೊಂದು ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ ಪ್ರಸಂಗ ನಗರದಲ್ಲಿ ಮಂಗಳವಾರ ನಡೆದಿದೆ.
ಕನ್ನಾಳ ಗ್ರಾಮದಿಂದ ಗಂಗಾವತಿ ನಗರಕ್ಕೆ ಕಾರ್ಯ ನಿಮಿತ್ತ ಎರಡು ಕಾರಿನಲ್ಲಿ ಹೊರಟಿದ್ದ ಸಜ್ಜನ ಪರಿವಾರದವರು ಇಲ್ಲಿಯ ಬಸವೇಶ್ವರ ವೃತ್ತದ ದರ್ಶನ ಹೋಟೆಲ್‌ನಲ್ಲಿ ಉಪಾಹಾರಕ್ಕೆಂದು ಇಳಿದಿದ್ದರು. ಉಪಾಹಾರದ ನಂತರ ಕಾರು ಹತ್ತಿ ಗಂಗಾವತಿಗೆ ಹೋಗಿದ್ದಾರೆ. ಆದರೆ, ಮಗು ಇದೆಯೋ ಇಲ್ಲವೋ ಎಂಬುದನ್ನು ಅವರು ಗಮನಿಸಿಲ್ಲ. ಗಂಗಾವತಿ ತಲುಪಿದ ಮೇಲೆ ಮಗು ಮಿಸ್ ಆಗಿರುವುದು ಗೊತ್ತಾಗಿದೆ.
ಈ ನಡುವೆ, ದರ್ಶನ ಹೋಟೆಲ್ ಹತ್ತಿರ ಅಳುತ್ತ ನಿಂತಿದ್ದ ಮಗುವನ್ನು ಪತ್ರಕರ್ತ ಜಾಕೀರ್‌ಹುಸೇನ ತಾಳಿಕೋಟಿ ಗಮನಿಸಿದ್ದಾರೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮಗುವಿನ ಭಾವಚಿತ್ರ, ವಿವರ, ಪೊಲೀಸರ ಫೋನ್ ನಂಬರ್ ಎಲ್ಲವನ್ನು ೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ವ್ಯಾಟ್ಸ್‌ಆ್ಯಪ್ ಮೂಲಕವೂ ಹಂಚಿಕೊಂಡಿದ್ದಾರೆ. ಅದು ಹಲವಾರು ಗ್ರೂಪ್‌ಗಳಿಗೆ ಹೋಗಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.
ೇಸ್‌ಬುಕ್‌ನಲ್ಲಿ ಮಗುವಿನ ಬಗ್ಗೆ ಮಾಹಿತಿ ಬಂದಿದ್ದನ್ನು ನೋಡಿ ಪಾಲಕರು ತಮ್ಮ ಸಂಬಂಧಿಕರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದ್ದಾರೆ. ಅವರು ಬಂದು ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಮಗುವಿನ ಮಾಹಿತಿಯನ್ನು ಪಡೆದು ನಂತರ ಜಾಕೀರ್‌ಹುಸೇನ ತಾಳಿಕೋಟಿಯವರನ್ನು ಭೇಟಿಯಾಗಿದ್ದಾರೆ. ಬಳಿಕ ಠಾಣೆಯಲ್ಲಿ ಪೊಲೀಸರ ಸಮಕ್ಷಮದಲ್ಲಿ ಮಗುವನ್ನು ಪಡೆದಿದ್ದಾರೆ.