

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಸನಿಹದ ತೂಮಿನಾಡಿನಲ್ಲಿ ಸ್ಕೂಟರ್-ಲಾರಿ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರ, ಉಪ್ಪಳ ಐಲ ಮೈದಾನ ಸನಿಹದ ನಿವಾಸಿ ಕಲ್ಪೇಶ್ ಉಚ್ಚಿಲ್(35) ಮೃತಪಟ್ಟಿದ್ದಾರೆ. ಕೆ.ಸಿ.ರೋಡ್ನ ಪೇಪರ್ಮಿಲ್ನಲ್ಲಿ ಉದ್ಯೋಗಿಯಾಗಿದ್ದು, ಮಂಗಳವಾರ ಸ್ಕೂಟರ್ನಲ್ಲಿ ಕೆಲಸಕ್ಕೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ವರ್ಷದ ಹಿಂದೆಯಷ್ಟೆ ಕಲ್ಪೇಶ್ ವಿವಾಹಿತರಾಗಿದ್ದರು.