ಕೊಳ್ಳೇಗಾಲದಲ್ಲಿ ಲಾರಿ ಮಾಲೀಕರ ಪ್ರತಿಭಟನೆ

16-KGL-1,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 37;
Published on

 ಕೊಳ್ಳೇಗಾಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಲಾರಿ ಮಾಲೀಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕೊಳ್ಳೇಗಾಲ ಲಾರಿ ಮಾಲೀಕರ ಸಂಘ ಬೆಂಬಲ ನೀಡಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ವೃತ್ತದಲ್ಲಿ ಕೊಳ್ಳೇಗಾಲ ತಾಲೂಕು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಸಂಘದ ಕಾರ್ಯದರ್ಶಿ ವಿನೋದ್ ಮಾತನಾಡಿ, ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ಸ್‌ನಿಂದ ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಸಲಾಗುತ್ತಿದೆ. ರಾಜ್ಯದಲ್ಲಿ 7 ತಿಂಗಳಲ್ಲಿ 5 ರೂ. ಡೀಸೆಲ್ ಬೆಲೆ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಟೋಲ್ ದರ ನಮ್ಮಲ್ಲಿ ಅಧಿಕವಿದೆ. ಅಲ್ಲದೆ, ಏಳು ರಾಜ್ಯಗಳಲ್ಲಿ ಗಡಿ ಚೆಕ್‌ಪೋಸ್ಟ್‌ಗಳನ್ನು ತೆರವು ಗೊಳಿಸಲಾಗಿದೆ. ನಮ್ಮ ರಾಜ್ಯದಲ್ಲಿ ತೆರವು ಮಾಡಿಲ್ಲ ಎಂದರು.

ಇವುಗಳಿಂದ ಲಾರಿ ಮಾಲೀಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಲಾರಿ ಚಾಲನೆ ಮಾಡಲು ವರ್ಷಕ್ಕೆ ನ್ಯಾಷನಲ್ ಪರ್ಮೀಟ್ ಎಂದು ಹಣವನ್ನು ಕಟ್ಟಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಸ್ತೆ ತೆರಿಗೆಯನ್ನು ಕಟ್ಟುತ್ತಿದ್ದರೂ ಟೋಲ್‌ಗಳಿಗೂ ಹಣ ಕಟ್ಟಬೇಕಿದೆ. ಈ ಎರಡು ತೆರಿಗೆ ನಮಗೆ ಹೊರೆಯಾಗಿದೆ. ಹಾಗಾಗಿ ಯಾವುದಾದರೂ ಒಂದು ತೆರಿಗೆಯನ್ನು ಪಾವತಿಸುವ ರೀತಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ದೇಶದ 10 ರಾಜ್ಯಗಳ ಗಡಿಯಲ್ಲಿರುವ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಿದ್ದಾರೆ. ಆದರೆ, ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರದ ಪುಣಜೂರು, ಗುಂಡ್ಲುಪೇಟೆ ಹಾಗೂ ಬೆಂಗಳೂರು ಹೊರ ವಲಯದ ಹೊಸೂರು ಚೆಕ್‌ಪೋಸ್ಟ್ ತೆರವುಗೊಳಿಸಿಲ್ಲ ಎಂದು ಅಕ್ರೋಶ ಹೊರ ಹಾಕಿದರು.

ಕೊಳ್ಳೇಗಾಲ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಕ್ರಮ್ ಪಾಷ, ಉಪಾಧ್ಯಕ್ಷ ಸಲ್ಮಾನ್, ನಿರ್ದೇಶಕ ಚೇತನ್ ಕುಮಾರ್, ರವಿ, ಬಿಜ್ಜು ಜೋಸೆಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net