

ಬಾಗಲಕೋಟೆ: ಹುನಗುಂದದ ಬೇವಿನಮಟ್ಟಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ದುರ್ಮರಣಕ್ಕೀಡಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಚಂದ್ರಶೇಖರ ಬುಟ್ಟಾ(22), ನವೀನ್ ಸಾಕಾ( 20), ಚೆನ್ನಬಸವ ಅಂಜಿ(22), ಬಸವರಾಜ ಭಂಡಾರಿ (33) ಮೃತ ದುರ್ದೈವಿಗಳು. ಮೃತರೆಲ್ಲರೂ ಇಳಕಲ್ನವರು.
ಬರ್ತ್ ಡೇ ಆಚರಣೆಗೆಂದು ಇವರೆಲ್ಲರೂ ಇಳಕಲ್ನಿಂದ ಗುಳೇದಗುಡ್ಡಕ್ಕೆ ಕಾರಿನಲ್ಲಿ ಹೋಗಿದ್ದರು. ಬರ್ತ್ ಡೇ ಸಂಭ್ರಮಾಚರಣೆಯ ಖುಷಿಯಲ್ಲೇ ವಾಪಸ್ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.