ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಇನ್ನೊಂದು ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು..

Lorry
Published on

ಬಾಗಲಕೋಟೆ: ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ರಸ್ತೆಯಲ್ಲಿ ವಾಹನ ಕೆಟ್ಟು ನಿಂತರೆ ನಿಲ್ಲಿಸಿದವರಿಗೂ ಆತಂಕ. ಇನ್ನು ವೇಗವಾಗಿ ಹೋಗುವ ವಾಹನಗಳವರಿಗೆ ಎದುರುಗಡೆ ಕೆಟ್ಟು ನಿಂತಿರುವ ವಾಹನ ಗಮನಕ್ಕೆ ಬರದಿರುವ ಸಾಧ್ಯತೆಯೂ ಅಧಿಕ. ಇಂಥದ್ದೇ ಒಂದು ಸಂದರ್ಭ ಈಗ ಚಾಲಕನೊಬ್ಬನನ್ನು ಬಲಿ ಪಡೆದಿದೆ.

ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದು, ಅದರ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕಲಬುರಗಿ ಮೂಲದ ಮಲ್ಲಿಕಾರ್ಜುನ ಕಾಚಾಪುರ (25) ಎಂಬಾತ ಸಾವಿಗೀಡಾಗಿರುವ ಚಾಲಕ. ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಭತ್ತ ತುಂಬಿದ್ದ ಲಾರಿ ರಾಯಚೂರಿನಿಂದ ಕೊಲ್ಹಾಪುರಕ್ಕೆ ಹೊರಟಿದ್ದು, ಮಾರ್ಗಮಧ್ಯೆ ಕೆಟ್ಟು ನಿಂತಿತ್ತು. ಹತ್ತಿ ತುಂಬಿದ್ದ ಲಾರಿ ಕಲಬುರಗಿಯಿಂದ ಬೆಳಗಾವಿಯ ಗೋಕಾಕಕ್ಕೆ ತೆರಳುತ್ತಿದ್ದು, ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net