ರಸ್ತೆಯಲ್ಲಿ ಹೂತು ಹೋದ ಲಾರಿ

accident-15
Published on

ಸುಳ್ಯ: ನಗರದ ರಥಬೀದಿಯ ಬಳಿ ಅಕ್ಕಿ ಸಾಮಾನು ಸರಬರಾಜು ಮಾಡುತ್ತಿದ್ದ ಲಾರಿಯೊಂದು ಹೂತು ಹೋಗಿದ್ದು, ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ತೆರವುಗೊಳಿಸಿದ ಘಟನೆ ಬುಧವಾರ ರಾತ್ರಿ ನಡೆಯಿತು. ಕುಡಿಯುವ ನೀರಿನ ಪೈಪ್​ ಅಳವಡಿಕೆಗಾಗಿ ರಸ್ತೆ ಅಗೆದ ಭಾಗದಲ್ಲಿ ಲಾರಿಯ ಚಕ್ರ ಹೂತು ಹೋಗಿತ್ತು. ಸಂಜೆ 5ರ ಸುಮಾರಿಗೆ ಘಟನೆ ನಡೆದಿದ್ದು ಲಾರಿಯನ್ನು ತೆರವುಗೊಳಿಸಿದಾಗ ರಾತ್ರಿ ಎಂಟು ದಾಟಿತ್ತು. ಇದರಿಂದ ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net