ಬೈಕ್​ಗೆ ಗುದ್ದಿದ ಬಸ್​, ಸವಾರ ಗಂಭೀರ

Btw_Accident`
Published on

ಬಂಟ್ವಾಳ: ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಉಗ್ಗಬೆಟ್ಟು ಎಂಬಲ್ಲಿ ಕೆಎಸ್​ಆರ್​ಟಿಸಿ ಬಸ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಗಾಯಾಳುವನ್ನು ವೇಣೂರು ಪೆರಿಂಜೆಯ ಗೋಪಾಲ ಪೂಜಾರಿ ಎಂದು ಗುರುತಿಸಲಾಗಿದೆ.

ಬಸ್​ ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಬರುತ್ತಿದ್ದು ಗೋಪಾಲ ಪೂಜಾರಿಯವರು ಬೈಕಿನಲ್ಲಿ ಮೂರ್ಜೆ ಕಡೆಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಸ್ಥಳಿಯರು ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net