ಕಾಣೆಯಾದವನ ಪತ್ತೆಗಾಗಿ ಲುಕ್‌ಔಟ್ ನೋಟಿಸ್

missing
Published on

ಪುತ್ತೂರು ಗ್ರಾಮಾಂತರ: ಆರು ತಿಂಗಳ ಹಿಂದೆ ಕಾಣೆಯಾಗಿರುವ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬಾರಿಕೆ ಮನೆ ಸಂಕಪ್ಪ ಪೂಜಾರಿ(37) ಅವರ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.

ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಸಂಕಪ್ಪ ಪೂಜಾರಿ ಕಳೆದ ಏಪ್ರಿಲ್ 27ರಂದು ಮನೆಯಿಂದ ಹೊರಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ಪತ್ತೆಗಾಗಿ ತನಿಖೆ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ದಿವಾಕರ ಪೂಜಾರಿ ನಾಪತ್ತೆಯಾದ ಆರಂಭದಲ್ಲಿ ಮನೆಯವರು ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದರು. ನಾವು ಕಾಡಿನೊಳಗೆ ಸಿಲುಕಿಕೊಂಡಿದ್ದೇನೆ. ದಾರಿ ಸಿಗುತ್ತಿಲ್ಲ ಎಂದಿದ್ದರು. ಆ ಬಳಿಕ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಈ ಹಿನ್ನೆಲಯಲ್ಲಿ ಪೊಲೀಸರು ಸ್ಥಳೀಯ ಕಾಡಿನೊಳಗೆ ಹುಡುಕಾಟ ನಡೆಸಿದ್ದರು. ಆದರೆ ದಿವಾಕರ ಪೂಜಾರಿ ಪತ್ತೆಯಾಗಿರಲಿಲ್ಲ.

ಮಾಹಿತಿ ಇದ್ದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕ-9480805363, ಪೊಲೀಸ್ ಉಪನಿರೀಕ್ಷಕ-8904216069, ಪೊಲೀಸ್ ಅಧೀಕ್ಷಕ-9480805301, ಜಿಲ್ಲಾ ಕಂಟ್ರೋಲ್ ರೂಂ 9480805300ಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net