ಪ್ರವಾಸಿಗರಿಗೆ ಒಂಟಿ ಸಲಗ ದರ್ಶನ

ಪ್ರವಾಸಿಗರಿಗೆ ಒಂಟಿ ಸಲಗ ದರ್ಶನ
Published on

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಜ್ಜೀಪುರ ಸಫಾರಿಯಲ್ಲಿ ಭಾನುವಾರ ತೆರಳಿದ್ದ ಪ್ರವಾಸಿಗರಿಗೆ ಬೃಹತ್ ಗಾತ್ರದ ಒಂಟಿ ಸಲಗವೊಂದು ದರ್ಶನವಾಗಿದ್ದು, ವಾಹನವನ್ನು ಹಿಂಬಾಲಿಸಿದ್ದರಿಂದ ಪ್ರವಾಸಿಗರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.

ಉಡುತೊರೆ ಜಲಾಶಯದ ಮೂಲಕ ಬೆಳಗ್ಗೆ ಪ್ರವಾಸಿಗರು ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಬಾರಿ ಗಾತ್ರದ ಒಂಟಿ ಸಲಗವೊಂದು ದರ್ಶನವಾಗಿದೆ. ಇದರಿಂದ ಹರ್ಷಗೊಂಡ ಪ್ರವಾಸಿಗರು ಕುತೂಹಲದಿಂದ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಆದರೆ ಈ ವೇಳೆ ಒಂಟಿ ಸಲಗ ರಭಸದಿಂದ ವಾಹನವನ್ನು ಹಿಂಬಾಲಿಸಿದಾಗ ಪ್ರವಾಸಿಗರು ಕೆಲಕಾಲ ಆತಂಕಕ್ಕೆ ಒಳಗಾದರಷ್ಟೇ ಹೊರತು ಯಾವುದೇ ಸಮಸ್ಯೆಯಾಗಲಿಲ್ಲ. ಈ ವೇಳೆ ಚಾಲಕ ಸಮಯ ಪ್ರಜ್ಞೆಯನ್ನು ಮೆರೆದು ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net