

ಮುನವಳ್ಳಿ: ಸಮೀಪದ ಹಿರೂರ ಗ್ರಾಮದಲ್ಲಿ ಮೇ 29ರಿಂದ ಜೂ 6ರ ವರೆಗೆ ಶ್ರೀ ಲೋಕುರೇಶ್ವರಿದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಮೇ 29 ರಂದು ಲೋಕೂರ ಗ್ರಾಮದಿಂದ ದೇವಿ ಬರಮಾಡಿಕೊಳ್ಳಲಾಗುವುದು. ರಾತ್ರಿ ಧರ್ಮದ ನುಡಿ ಬೆಂಕಿಯ ಕಿಡಿ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 30 ರಂದು ಮಲಪ್ರಭಾ ನದಿಯಲ್ಲಿ ಪೂಜೆ ಸಲ್ಲಿಸಿ ನೀರು ತರುವುದು. ಸಂಜೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಮೇ 31ರಂದು ಬೆಳಗ್ಗೆ ಹನುಮಂತದೇವರ ಓಕುಳಿ ಕಾರ್ಯಕ್ರಮ, ರಾತ್ರಿ ಸರ್ಕಾರಕ್ಕೇನು ಗೊತ್ತು ಅನ್ನದಾತನ ತಾಕತ್ತು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಜೂ. 1, 2 ರಂದು ಬೆಳಗ್ಗೆ ಆಸದೇವರ ಪದ ಜರುಗಲಿವೆ. ಜೂ.3 ರಂದು ಯಕ್ಕೇರಿ ಕರೆಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸೋಲಿಲ್ಲದ ಸಿಂಧೂರ ಲಕ್ಷ$್ಮಣ ನಾಟಕ ಪ್ರದರ್ಶನಗೊಳ್ಳಲಿದೆ. ಜೂ. 4 ರಂದು ದೇವಿಯ ಹೊನ್ನಾಟದ ಬಳಿಕ ಸೀಮೆಗೆ ಹೋಗಿ ಜಾತ್ರೆ ಸಂಪನ್ನಗೊಳ್ಳಲಿದೆ. ಜೂ.5ರಂದು ಉರುಸ್ ಹಾಗೂ ಜೂ.6 ರಂದು ಅಡಿಬಡ್ಡಿ ಪೂಜೆ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.